ಮೈಸೂರು: ನಾಳೆ ಮೈಸೂರಿನಲ್ಲಿ ಸ ರಿ ಗ ಮ ಪ ಖ್ಯಾತಿಯ ಗಾಯಕಿ ಪ್ರಜ್ಞಾ ಮರಾಠೆ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಇದೆ.
ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಚಾತುರ್ಮಾಸ್ಯ ಸಮಿತಿ ವತಿಯಿಂದ ಉಡುಪಿ ಕಾಣಿಯೂರು ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರ 35ನೇ ಚಾತುರ್ಮಾಸ್ಯ ವ್ರತದ
ಅಂಗವಾಗಿ ಸ ರಿ ಗ ಮ ಪ ಖ್ಯಾತಿಯ ಗಾಯಕಿ ಪ್ರಜ್ಞಾ ಮರಾಠೆ ಮತ್ತು ಮಾಸ್ಟರ್ ಅನ್ವಿತ್ ಸಂಗೀತ ಕಾರ್ಯಕ್ರಮ
ಸರಸ್ವತಿಪುರಂ ಶ್ರೀ ಕೃಷ್ಣ ದಾಮದಲ್ಲಿ ನಾಳೆ ಗುರುವಾರ ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಪ್ರಕಟಣೆಯ ಮೂಲಕ ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರು ಹಾಗೂ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ರವಿಶಾಸ್ತ್ರಿ ಮನವಿ ಮಾಡಿದ್ದಾರೆ.
