ಮೈಸೂರು: ಪತ್ನಿಯ ಶೀಲ ಶಂಕಿಸಿದ ಪತಿ ಲಾಂಗ್ನಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ಹುಣಸೂರಿನ ರಜಾಕ್ ಮೊಹಲ್ಲಾದಲ್ಲಿ ನಡೆದಿದೆ.
ರಜಾಕ್ ಮೊಹಲ್ಲಾದ ಸಮಿವುಲ್ಲಾ ಎಸ್ಕೇಪ್ ಆಗಿರುವ ಪಾಪಿ ಪತಿ.
ಘಟನೆ ವೇಳೆ ತಾಯಿಯ ನೆರವಿಗೆ ಬಂದ ಮಕ್ಕಳ ಮೇಲೂ ಆತ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ಪತ್ನಿ ಸಮೀನಾಬಾನು ಹಾಗೂ ಮಗ ಅಬ್ನಾನ್ ಷರೀಫ್ ಮತ್ತು ಮಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ಸಮಿವುಲ್ಲಾ-ಸಮೀನಾಬಾನು ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು.ಪತ್ನಿಯ ನಡುವಳಿಕೆ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ. ಪತಿಯ ಕಿರುಕುಳದಿಂದ ಬೇಸತ್ತ ಸಮೀನಾಬಾನು ತಿಂಗಳ ಹಿಂದೆ ಗುರುಪುರದ ತವರು ಮನೆ ಸೇರಿದ್ದಳು.
ಬುಧವಾರ ಎರಡೂ ಕುಟುಂಬದ ಹಿರಿಯರ ನಡುವೆ ರಾಜಿ ಸಂಧಾನ ನಡೆದ ಪರಿಣಾಮ ಸಮೀನಾಬಾನು ಗಂಡನ ಮನೆಗೆ ಹಿಂದಿರುಗಿದ್ದಳು.
ಅದಾದ ನಂತರ ರಾತ್ರಿ ಊಟಮಾಡಿ ಎಲ್ಲರೂ ಮಲಗಿದ್ದ ವೇಳೆ ಮೊದಲೇ ಸಂಚು ರೂಪಿಸಿದ್ದ ಸಮೀವುಲ್ಲ
ಪತ್ನಿಯ ಮೇಲೆ ಮನಸೋ ಇಚ್ಚೆ ಲಾಂಗ್ನಿಂದ ಹಲ್ಲೆ ನಡೆಸಿದ್ದಾನೆ.ತಡೆಯಲು ಬಂದ ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾನೆ.
ಈ ಸಂಬಂಧ ಸಮೀನಾಬಾನು ತಂದೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
