ಕೊಳ್ಳೇಗಾಲ: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗಶೆಟ್ಟಿ ಅವರನ್ನು ಕೊಳ್ಳೇಗಾಲ ತಾಲ್ಲೂಕಿನ 12 ಚರ್ಚ್ ಗಳ ಫಾದರ್ ಗಳು ಹಾಗೂ ಸಭಾಪಾಲಕರುಗಳು ಸನ್ಮಾನ ಮಾಡಿ ಗೌರವಿಸಿದರು.
ಕೊಳ್ಳೇಗಾಲ ಕ್ರೈಸ್ತ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ ಸೆಲ್ವರಾಜು ಹಾಗೂ ಬೆತೇಲ್ ಲೂಥರ್ ಚರ್ಚಿನ ಅಧ್ಯಕ್ಷ ಟಿ. ಜಾನ್ ಪೀಟರ್ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಯಳಂದೂರಿನ ಉಪ್ಪಿನ ಮೂಳೆಯಲ್ಲಿರುವ ಸಚಿವರ ಮನೆಗೆ ತೆರಳಿದ ಫಾದರ್ ಗಳು ಹಾಗೂ ಸಭಾಪಾಲಕರುಗಳು ಪ್ರಾರ್ಥನೆ ಸಲ್ಲಿಸಿ ಸನ್ಮಾನಿಸಿ ಮಾಡಿ ಗೌರವಿಸಿದರು.
ಈ ವೇಳೆ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಉತ್ತಮ ಮಳೆ, ಬೆಳೆಯನ್ನು ದೇವರು ದಯಪಾಲಿಸಲಿ ಎಂದು ಹಾಗೂ ಸಚಿವ ಪುಟ್ಟರಂಗಶೆಟ್ಟಿ ಅವರ ಸೇವೆಗಾಗಿ ಪ್ರಾರ್ಥಿಸಿದ ಅವರು ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಕಾಮಗೆರೆ ಎಸ್ಡಿಎ ಚರ್ಚ್ ನ ಫಾದರ್ ಆಂಟನಿ ಕುಮಾರ್, ಕೊಳ್ಳೇಗಾಲ ಬೆತೇಲ್ ಲೂಥರನ್ ಚರ್ಚಿನ ಫಾದರ್ ಜೋಸುವ ಪ್ರಸನ್ನ, ಸಭಾ ಪಾಲಕ ರೆವರೆಂಡರ್ ಆಡಿಸ್ ಅರಾಲ್ಡ್, ಎಬಿನೇಜರ್ ಬ್ರದರನ್ ಸಭೆಯ ಕರುಣಾಕರ್, ಸಿ ಎಸ್ ಐ ದಿವ್ಯಾಶೀರ್ವಾದದ ಸಭೆಯ ಜಾಯ್ ಪ್ರಿಯದರ್ಶಿನಿ, ಕಲ್ವಾರಿ ಎಜೆ ಚರ್ಚ್ ಫಾದರ್ ಜೋವೆಲ್ ನಾರಾಯಣ್, ಅದ್ಭುತ ಏಸು ಸಭೆಯ ಜೋಸೆಫ್ ನಾರಾಯಣ್, ಅರುಣೋದಯ ಯೇಸು ಚರ್ಚ್ ನ ಸಭಾ ಪಾಲಕರಾದ ಜೆರುಬಾಬೀಲ್ ಮತ್ತು ವಿನ್ಸೆಂಟ್ ಅಮೂಲ್ ದಾಸ್, ಅಪುಸ್ತಲಿ ಚರ್ಚಿನ ಸದಸ್ಯರು ಹಾಗೂ ನಗರಸಭಾ ಸದಸ್ಯರಾದ ಆನಂದ್, ಎಸ್ ಡಿ ಎ ಚರ್ಚಿನ ಸಭಾ ಹಿರಿಯರಾದ ಡಿ ಸಾಮುಯಲ್, ಭಕ್ತರಾಜ್ ಸಾಲೋಮನ್ ಸೇರಿದಂತೆ ತಾಲ್ಲೂಕಿನ 12 ಚರ್ಚ್ ಗಳ ಫಾದರ್ ಗಳು ಹಾಗೂ ಸಭಾ ಪಾಲಕರುಗಳು ಭಾಗವಹಿಸಿದ್ದರು.
