ಮೈಸೂರು: ಸಂಗೀತ ಲೋಕಕ್ಕೆ ಎಸ್ ಜಾನಕಿ ಅವರ ಕೊಡುಗೆ ಅನನ್ಯವಾದದ್ದು ಎಂದು ಶಾಸಕ ಟಿಎಸ್ ಶ್ರೀವತ್ಸ ಬಣ್ಣಿಸಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಪಾತಿ ಫೌಂಡೇಶನ್ ವತಿಯಿಂದ
ಆಯೋಜಿಸಿದ್ದ ಎಸ್ ಜಾನಕಿ ಅವರ ಗಾಯನಕ್ಕೆ ಗಾನಾಭಿಷೇಕ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೆಲುಗು ಮಾತೃಭಾಷೆಯಾಗಿದ್ದರೂ ಎಸ್ ಜಾನಕಿ ಅವರು ಕನ್ನಡದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿ ಕನ್ನಡಿಗರ ಪ್ರೀತಿ ಪಾತ್ರರಾದರು.ಕನ್ನಡ ನಾಡಿನಲ್ಲೆ ನೆಲೆಸಿ , ಮೈಸೂರಿನಲ್ಲಿ ಕೊನೆ ಉಸಿರು ಬಿಟ್ಟರು, ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ರೀವತ್ಸ ಹೇಳಿದರು.
ವಿಧಾನ ಪರಿಷತ್ ಸದಸ್ಯ ಆರ್ ರಘು ಕೌಟಿಲ್ಯ ಮಾತನಾಡಿ, ಇಂಪಾದಕಂಠ ಹಾಗೂ ವಿನಯಶೀಲ ವ್ಯಕ್ತಿತ್ವದಿಂದ ಎಸ್ ಜಾನಕಿ ಅವರು ಭಾರತೀಯ ಸಂಗೀತ ಲೋಕದಲ್ಲಿ ಶಾಶ್ವತ ಚಾಪು ಮೂಡಿಸಿದ್ದಾರೆ, ಅವರ ಗಾಯನ ಸದಾ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಜೀವಂತವಾಗಿರಲಿದೆ ಎಂದು ಹೇಳಿದರು.
ಸಂಗೀತ ಸುಧೆ ಹಾಗೂ ಸಾಂಸ್ಕೃತಿಕ ಮೆರಗಿಗೆ ಮೇರು ಪರ್ವತದಂತಿದ್ದ ಭಾರತೀಯ ಸಂಸ್ಕೃತಿಯ ಕೋಗಿಲೆ ಕಂಠದ ನಾರಿ, ಎಸ್. ಜಾನಕಿಯವರು ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಅವರು ಹಾಡಿದ ರಸಧಾರೆಯನ್ನು ಆಲಿಸುವುದೇ ಈ ಜನ್ಮದ ಸುಕೃತ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಗೆ ನೂತನ ಸದಸ್ಯರಾಗಿ ಆಯ್ಕೆಯಾದ ಆರ್ ರಘು ಕೌಟಿಲ್ಯ, ಯೋಗ ಕ್ಷೇತ್ರದ ಸಾಧನೆಗೈದ ಅನಂತು, ಸಾಹಿತ್ಯ ಕ್ಷೇತ್ರದಿಂದ ಪುಷ್ಪ ಅಯ್ಯಂಗಾರ್ ಹಾಗೂ ಧಾರ್ಮಿಕ ಕ್ಷೇತ್ರದಿಂದ ವೈದೇಹಿ ಅಯ್ಯಂಗಾರ್ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ,ಆರ್ ಎಸ್ ಎಸ್ ನ ಮಾ ವೆಂಕಟ್ ರಾಮ್ ಜಿ,ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್, ವಕೀಲರಾದ ಮಧ್ವರಾಜ್, ಪಾತಿ ಫೌಂಡೇಶನ್ ಅಧ್ಯಕ್ಷ ಎಂಡಿ ಪಾರ್ಥಸಾರಥಿ, ನಗರಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್,ವಿಪ್ರ ಮುಖಂಡರಾದ ನಂ ಶ್ರೀಕಂಠಕುಮಾರ್ , ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಟಿ.ಎಸ್ ಅರುಣ್, ರಾಜಕುಮಾರ್, ಗಾಯಕ ಕೃಷ್ಣಮೂರ್ತಿ, ಬಸವರಾಜ್, ಮಹದೇವ್, ಮಂಜುನಾಥ್, ಪುರುಷೋತ್ತಮ್ ಮತ್ತಿತರರು ಹಾಜರಿದ್ದರು.
