ಮೈಸೂರು: ಹೂಟಗಳ್ಳಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ಹೂಟಗಳ್ಳಿ ನಗರಸಭೆ ಮತ್ತು ಲಯನ್ಸ್ ಕ್ಲಬ್ ಆಫ್ ಮೈಸೂರ್ ಎಲೈಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಈ ಶಿಬಿರವನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಮೂರ್ತಿ ಅವರು ಗಣ್ಯರ ಜೊತೆ ಉದ್ಘಾಟನೆ ಮಾಡಿದರು.
ನಾರಾಯಣ ಆಸ್ಪತ್ರೆ ಮತ್ತು ವಾಸನ್ ಐ ಕೇರ್ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರಿಂದ ತಪಾಸಣೆ ಮಾಡಲಾಯಿತು,150 ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು.
ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎನ್.ಟಿ. ದಾಸೇಗೌಡ ಅವರ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಶ್, ಖಜಾಂಚಿ ಮೋಹನ್ ಮತ್ತು ಪದಾಧಿಕಾರಿಗಳು,ಸದಸ್ಯರ ನೇತೃತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಸಾತನೂರು ದೇವರಾಜ್, ಮಾಜಿ ಅಧ್ಯಕ್ಷರಾದ ಕೃಷ್ಣನ್, ಬಾಲಕೃಷ್ಣ, ಧರ್ಮರಾಜು, ಬೆಟ್ಟೇಗೌಡರು, ಲಯನ್ಸ್ ಕ್ಲಬ್ ಆಫ್ ಮೈಸೂರ್ ಎಲೈಟ್ ಸಂಸ್ಥೆಯ ಅಧ್ಯಕ್ಷರಾದ ಲಯನ್ ಹನುಮಂತಪ್ಪ ಮೇಟಿ,ಕಾರ್ಯದರ್ಶಿ ಲಯನ್ ಸುರೇಶ್ ಬಿ.ಕೆ., ಖಜಾಂಚಿ ಲಯನ್ ಪಾರ್ಥ ಲಯನ್ ಚಂದ್ರಿಕ ಪಾರ್ಥ, ಲಯನ್ ರಕ್ತದಾನಿ ಮಂಜು, ಲಯನ್ ಯಾದವ್ ಹರೀಶ್ ಭಾಗವಹಿಸಿದ್ದರು.
ಹೂಟಗಳ್ಳಿಯ ಜಿ ಡಿ ಎಸ್ ಮುಖಂಡರಾದ ಸುರೇಶ್, ಡೈರಿ ಸಿದ್ದರಾಜು, ತಾಲೋಕು ಪಂಚಾಯತಿ ಮಾಜಿ ಸದಸ್ಯ ವಿಜಯಕುಮಾರ್ ಮತ್ತು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಪದಾಧಿಕಾರಿಗಳು ಮಹಿಳಾ ಪದಾಧಿಕಾರಿಗಳು ಹಾಜರಿದ್ದರು.
