ರಾಜಸ್ಥಾನ: ರಾಜಸ್ಥಾನದ ಬಾರ್ಮರ್ ನಗರದಲ್ಲಿ, ಮನೆ ತೋರಿಸುವ ನೆಪದಲ್ಲಿ ಪಕ್ಕದ ಮನೆಯ ವ್ಯಕ್ತಿ 7 ವರ್ಷದ ಬಾಲಕಿಯ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಬಾಲಕಿ ತನ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ, ಆರೋಪಿ ಯುವಕನು ಅಪರಿಚಿತ ವ್ಯಕ್ತಿಯೊಬ್ಬನ ಹೆಸರನ್ನು ಹೇಳಿ ಆತನ ಮನೆಯನ್ನು ತೋರಿಸುವಂತೆ ಕೇಳಿದ್ದಾನೆ.ನಂತರ ಆಕೆಯನ್ನು ತನ್ನೊಂದಿಗೆ ಕರೆದೊಯ್ದು, ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಪೊದೆಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ನೋವಿನಿಂದ ಅಳುತ್ತಲೇ ಮನೆಗೆ ತಲುಪಿದ ಬಾಲಕಿ, ತನಗಾದ ನೋವನ್ನು ಕುಟುಂಬದವರಿಗೆ ತಿಳಿಸಿದ್ದಾಳೆ. ಕುಟುಂಬದವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಬಾಲಕಿಯನ್ನು ತಪಾಸಣೆ ಮಾಡಿದ ಪೊಲೀಸರು ಆಕೆಗೆ ಲೈಂಗಿಕ ಕಿರುಕುಳ ಆಗುರುವುದನ್ನು ದೃಡಪಡಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕುಟುಂಬದವರ ಹೇಳಿಕೆಯನ್ನು ದಾಖಲಿಸಿಕೊಂಡು, ಅಪರಾಧ ನಡೆದ ಸ್ಥಳವನ್ನು ಪರಿಶೀಲಿಸಿ,ಬಾಲಕಿತ ಹೇಳಿಕೆ ಪಡೆದು ಅಸರೋಪಿ ಯುವಕನನ್ನು ಬಂಧಿಸಿ,ಮುಂದಿನ ಕ್ರಮ ಕೈಗೊಂಡಿದ್ದಾರೆ.
