ಮೈಸೂರು: ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಹಳೇಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಪ್ರಕರಣದ ಆರೋಪಿ ಉಲ್ಲಾಸ್ ಗೌಡ ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಉಲ್ಲಾಸ್ ಗೌಡನ ಬಂಧನಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ವಿಶೇಷ ತಂಡ ರಚಿಸಿದ್ದರು.
ಇನ್ಸ್ಪೆಕ್ಟರ್ ಧನಂಜಯ್, ಶಿವಾನಂದ ಶೆಟ್ಟಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಉಲ್ಲಾಸ್ ಗೌಡನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿಸಿದ ಕೂಡಲೇ ನ್ಯಾಯದೀಶರ ಮುಂದೆ ಹಾಜರುಪಡಿಸಲಾಗುದ್ದು ಈಗ ಉಲ್ಲಾಸ್ ಗಡನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
