ಮೈಸೂರು: ಪಿ ಜಿ ಆರ್ ಎಸ್ ಎಸ್ ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ತಾಯಂದಿರಿಗೆ ಇಂದು ಹಬ್ಬದ ಸಡಗರ.
ಇದಕ್ಕೆ ಕಾರಣ ಮೈಸೂರಿನ ದೇವೇಂದ್ರ ಅವರ ಸ್ನೇಹಿತರಾದ ದಿನೇಶ್ ಅವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಎಲ್ಲಾ ತಾಯಂದಿರಿಗೆ ದಿನಸಿ ಪದಾರ್ಥ ಕೊಟ್ಟು ಆಶೀರ್ವಾದ ಪಡೆದುದು.
ಈ ವೇಳೆ ದಿನೇಶ್ ಅವರು ಮಾತನಾಡಿ, ತಾಯಂದಿರ ರಕ್ಷಣೆ ನಮ್ಮ ಕರ್ತವ್ಯ, ಎಷ್ಟೋ ಜನ ಮಕ್ಕಳು ತಾಯಂದಿರನ್ನ ಬಿಟ್ಟು ಹೋಗಿದ್ದಾರೆ ಆದರೆ ಪ್ರತಿಯೊಬ್ಬ ಮಕ್ಕಳು ತಾಯಂದಿರನ ನೋಡಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಫ್ರೆಂಡ್ಶಿಪ್ ಟೀಮ್ ಕಮಿಟಿ ಅಧ್ಯಕ್ಷರಾದ ಪವನ್ ಅವರು ಮಾತನಾಡಿ,ಈ ತಾಯಂದಿರಿಗೆ ಒಂದು ವರ್ಷ ಪ್ರತಿದಿನ ಹಾಲು ಮೊಸರು ವ್ಯವಸ್ಥೆಯನ್ನು ನಾನು ಮಾಡುತ್ತೇನೆ ಎಂದು ತಿಳಿಸಿದರು.
PGRSS ಅಧ್ಯಕ್ಷರಾದ ಯಾದವ್ ಹರೀಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಕ್ತದಾನಿ ಮಂಜು, ಕಾನಾರಾಮ್, ವಿಕಾಸ್ ಮತ್ತಿತರರು ಈ ವೇಳೆ ರಾಜರಿದ್ದರು.
