ಯಳಂದೂರು: ದೈನಂದಿನ ಜೀವನದಲ್ಲಿ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದು ಪ್ರಾಂಶುಪಾಲರಾದ ಎಂ. ಕುಮಾರಸ್ವಾಮಿ ಹೇಳಿದರು.
ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗ ಎಂದರೆ ಕೇವಲ ದೈಹಿಕ ಕಸರತ್ತು ಅಥವಾ ಆಸನಗಳಲ್ಲ, ಇದು ದೇಹ, ಮನಸ್ಸು ಮತ್ತು ಆತ್ಮವನ್ನು ಬೆಸೆಯುವ ಅದ್ಭುತವಾದ ಕಲೆ. ನಮ್ಮ ಭಾರತದ ಪ್ರಾಚೀನ ಋಷಿ-ಮುನಿಗಳು ನಮಗೆ ನೀಡಿರುವ ಅಮೂಲ್ಯ ಕೊಡುಗೆ, ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಯೋಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಜ್ಣಾನೇಂದ್ರ ಸ್ವಾಮಿ, ವಾರ್ಡನ್ ತ್ಯಾಗರಾಜು, ಶಿಕ್ಷಕರಾದ ಸುನೀಲ್ ಕುಮಾರ್, ರಾಜಶೇಖರ್, ಸಿದ್ದಮುತ್ತು, ಚಿನ್ನ ಮುತ್ತು, ಪ್ರದೀಪ್, ಚೇತನ್, ರಿತೇಶ್ ಮತ್ತು ಮಕ್ಕಳು ಹಾಜರಿದ್ದರು.
