ಕೊಳ್ಳೇಗಾಲ: ತಾಲ್ಲೂಕಿನ ಶಿವನ ಸಮುದ್ರದ ಸಮೂಹ ದೇವಾಲಯಗಳ ಹುಂಡಿ ಎಣಿಕೆ ಕಾರ್ಯ ನಡೆದು 13.90 ಲಕ್ಷ ರೂ. ಹಣ ಸಂಗ್ರಹವಾಗಿದೆ.
ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಹಾಗೂ ಸಮೂಹ ದೇವಾಲಯಗಳ ಆಡಳಿತಾಧಿಕಾರಿಗಳು ಆಗಿರುವ ದಿನೇಶ್ ಕುಮಾರ್ ಮೀನಾ ರವರ ಆದೇಶದ ಮೇರೆಗೆ ಕೊಳ್ಳೇಗಾಲ ತಹಶೀಲ್ದಾರ್ ಬಸವರಾಜುರವರ ಉಪಸ್ಥಿತಿಯಲ್ಲಿ ಮಧ್ಯ ರಂಗನಾಥಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಸಮೂಹ ದೇವಾಲಯಗಳಾದ ಮಧ್ಯ ರಂಗನಾಥಸ್ವಾಮಿ ದೇವಾಲಯ, ಪ್ರಸನ್ನ ಮೀನಾಕ್ಷಿ ಹಾಗೂ ಸೋಮೇಶ್ವರ ದೇವಾಲಯ ಮತ್ತು ಆದಿಶಕ್ತಿ ಮಾರಮ್ಮ ದೇವಾಲಯಗಳ ಹುಂಡಿಗಳ ಎಣಿಕೆ ನಡೆಯಿತು.
ಈ ಮೂರು ದೇವಾಲಯಗಳಿಂದ ಒಟ್ಟು 13, 90,190 ರೂ. ನಗದು ಸಂಗ್ರಹವಾಗಿದೆ. ಎಣಿಕೆ ವೇಳೆ ಚಿನ್ನ, ಬೆಳ್ಳಿ ಇತರ ಯಾವುದೇ ಪದಾರ್ಥಗಳು ದೊರಕಿಲ್ಲ. ಕಳೆದ ಮಾರ್ಚ್ 16 ರಿಂದ ಇಲ್ಲಿಯ (ಜೂ.17) ವರೆಗೆ 3 ತಿಂಗಳ ಅವಧಿಯಲ್ಲಿ ಭಕ್ತರು ಸಲ್ಲಿಸಿದ್ದ ಹರಕೆಯಿಂದ ಈ ಮೊತ್ತ ಸಂಗ್ರಹವಾಗಿದೆ
ಬೆಳಿಗ್ಗೆಯಿಂದ ಸಂಜೆ ವರೆಗೆ ಹುಂಡಿಗಳ ಎಣಿಕೆ ಕಾರ್ಯ ನಡೆದಿದೆ.
ಈ ವೇಳೆ ಸಮೂಹ ದೇವಾಲಯಗಳ ಕಾರ್ಯ ನಿರ್ವಾಹಕಾಧಿಕಾರಿ ಸುರೇಶ್, ಪಾಳ್ಯ ಉಪ ತಹಶೀಲ್ದಾರ್ ವಿಜಯ ಕುಮಾರ್, ರಾಜಸ್ವ ನೀರಿಕ್ಷಕ ರಂಗಸ್ವಾಮಿ, ಕಸಬಾ ರಾಜಸ್ವ ನೀರಿಕ್ಷಕ ನಿರಂಜನ್, ಕಸಬಾ ಮತ್ತು ಪಾಳ್ಯ ಹೋಬಳಿಯ ಗ್ರಾಮ ಆಡಳಿತಾಧಿಕಾರಿಗಳಾದ ರಾಕೇಶ್ ಮರಾಠ್, ಹೇಮಾ, ಪ್ರದೀಪ್, ಶಾಂತರಾಜು, ಸತೀಶ್, ಕುಮಾರ್, ಗ್ರಾಮ ಸಹಾಯಕರುಗಳಾದ ಸೀಗನಾಯಕ, ಬಸವರಾಜು, ನಾಗರಾಜು ಕೋಟೆಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ಮತ್ತು ಸಿಬ್ಬಂದಿ, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಸಿಬ್ಬಂದಿ, ದೇವಾಲಯದ ಅರ್ಚಕರಾದ ಶ್ರೀಧರ್ ಆಚಾರ್, ಮಾಧವಭಟ್, ಮಧುಸೂದನ್, ನಾಗರಾಜು ದೀಕ್ಷಿತ್ ಮತ್ತಿತರರು ಭಾಗವಹಿಸಿದ್ದರು.
