ಮೈಸೂರು: ಮೈಸೂರಿನಲ್ಲಿ ಇತ್ತೀಚೆಗೆ ನಿಧನ ಹೊಂದಿದ ಕುರುಬಾರಹಳ್ಳಿ ಯಜಮಾನರಾದ ಅಪ್ಪುಗೌಡ ಅವರಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘ ಮೈಸೂರು ನಗರ,ಜಿಲ್ಲೆ, ತಾಲೂಕು ಕುರುಬರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಪ್ಪುಗೌಡ ಅವರ ಭಾವಚಿತ್ರ ಇಟ್ಟು ಪುಷ್ಪ ನಮನ ಸಲ್ಲಿಸಲಾಯಿತು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷರಾದ ಬಿ ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷರಾದ ಬಸವರಾಜ, ಮುಖಂಡರುಗಳಾದ ರವಿ, ಶಿವಣ್ಣ, ಪ್ರಕಾಶ್, ಮಾದೇಗೌಡ, ಶಾಂತ ಮತ್ತು ಅಪ್ಪುಗೌಡ ಅವರ ಹಿತೈಷಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
