ಬೆಳಗಾವಿ: ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಮೇಲೆ ಎಫ್ ಐ ಆರ್ ದಾಖಲು ಮಾಡಲಾಗಿದೆ ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಬೆಳಗಾವಿಯ ಆದಿತ್ಯರಾಜ್ ಕ್ಯಾಪಿಟಲ್ ಖಾಸಗಿ ಕಂಪನಿ ಮೇಲೆ ನಡೆದ ದಾಳಿ ಪ್ರಕರಣ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಮೇಲೆ ನನ್ನ ಆದೇಶದ ಮೇಲೆ ಎ ಸಿ ಶ್ರವಣ್ ನಾಯಕ್ ದಾಳಿ ಮಾಡಿದ್ದಾರೆ. ಆದಿತ್ಯರಾಜ್ ಕ್ಯಾಪಿಟಲ್ ಎರಡು ರೀತಿಯ ಕೆಲಸ ಮಾಡಿದೆ. ದಾಖಲೆ ಇಲ್ಲದೆ ಹಣವನ್ನು ಸಂಗ್ರಹಿಸಿ ಎರಡು ರೀತಿಯಲ್ಲಿ ಬಳಕೆ ಮಾಡಿದೆ ಎಂದು ತಿಳಿಸಿದರು.
ತಿಂಗಳಿಗೆ ಶೇ 5 ರಷ್ಟು ಬಡ್ಡಿ ಕೊಡುವ ಆಮೀಷವೊಡ್ಡಿ,ಶೇಕಡಾ ಐದರಷ್ಟು ಅಸಲು ನೀಡುವ ಒಪ್ಪಂದ ಮಾಡಿಕೊಂಡಿದ್ದರು, ಒಪ್ಪಂದದಲ್ಲಿ ರಿಸ್ಕ್ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ,ಒಟ್ಟಾರೆ 7 ಸಾವಿರ ಜನರು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಕರಣ 50 ಕೋಟಿ ಮೀರಿದ್ದು, ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗುವುದು. ಹಣ ಹೂಡಿಕೆ ಮಾಡಿದವರಿಗೆ ಚೆಕ್ ನೀಡಿದ್ದಾರೆ. ನಿನ್ನೆ ವರದಿ ಬಂದಿದ್ದು ಅಪರ ಮುಖ್ಯ ಕಾರ್ಯಾದರ್ಶಿಗೆ ವರದಿ ಕಳುಸಿದ್ದೇನೆ ಎಂದು ತಿಳಿಸಿದರು.
ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಸಿಇಒ ಬಲಮಾರ್ ಮಾನೆ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿ ಎಲ್ಲಾ ಏರ್ ಪೋರ್ಟ್ ಗಳಿಗೆ ಮಾಹಿತಿ ರವಾನಿಸಲಾಗಿದೆ. ಆತ ಈಗ ಪರಾರಿಯಾಗಿದ್ದಾನೆ, ದೇಶ ಬಿಟ್ಟು ಹೋಗದಂತೆ ನಾವು ಕ್ರಮ ವಹಿಸುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮಾತನಾಡಿ, ಸಹಕಾರ ಇಲಾಖೆಯ ಅಧಿಕಾರಿಗಳ ದೂರಿನ ಅನ್ವಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ರೇಡ್ ಮಾಡುವಾಗ ಕಂಪ್ಯೂಟರ್ ಫಾರ್ಮೆಟ್ ಮಾಡಿರೋದು ಪತ್ತೆಯಾಗಿದೆ ಎಂದು ತಿಳಿಸಿದರು.
ಈಗಾಗಲೇ ಆದಿತ್ಯರಾಜ್ ಗೆ ಸೇರಿದ ಮೂರು ಕಂಪನಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ಕಂಪನಿಯ ಸಿಇಒ ಬಾಲರಾಜ್ ಬಂಧನಕ್ಕೆ ಮೂರು ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳಿದರು.
ಆದಿತ್ಯರಾಜ್ ಕಂಪನಿ ಯಾವುದೇ ಅನುಮತಿ ಪಡೆದಿಲ್ಲ. ಠೇವಣಿ ಹಣಕ್ಕೆ ತಿಂಗಳಿಗೆ ಶೇಕಡಾ ಐದರಷ್ಟು ಬಡ್ಡಿ ಕೋಡುವ ಭರವಸೆ ನೀಡಿದ್ರು. 6500 ಹೂಡಿಕೆದಾರರ ಬಗ್ಗೆ ಮಾಹಿತಿ ಇದೆ. ಸಿಐಡಿಗೆ ಕೇಸ್ ವರ್ಗವಾಣೆ ಮಾಡಲು ಪತ್ರ ಬರೆದಿದ್ದೇವೆ. ಮೂರು ಕಡೆ ದಾಳಿ ಮಾಡಿ ಲ್ಯಾಪ್ಟಾಪ್ ಸೀಜ್ ಮಾಡಿದ್ದೇವೆ, ಸಾಕ್ಷ್ಯ ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ,ಜತೆಗೆ ಕಂಪನಿಯ ಸಿಬ್ಬಂದಿ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಭೂಷಣ್ ಬೊರಸೆ ಎಂದು ಹೇಳಿದರು.
