ಮೈಸೂರು: ತುಮಕೂರು ವಿಶ್ವವಿದ್ಯಾಲಯ ಆಯೋಜಿಸಿದ್ದ ರಾಜ್ಯಮಟ್ಟದ ‘ಇಂಪ್ರೆಷನ್-2026’ ಅಂತರ್-ವಿಶ್ವವಿದ್ಯಾಲಯ ಮಾಧ್ಯಮ ಹಬ್ಬದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಕರ್ನಾಟಕದ ಅತಿದೊಡ್ಡ ಪತ್ರಿಕೋದ್ಯಮ ಉತ್ಸವಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿರುವ ಈ ಮಾಧ್ಯಮ ಹಬ್ಬದಲ್ಲಿ ರಾಜ್ಯಾದ್ಯಂತ 15ಕ್ಕೂ ಹೆಚ್ಚು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ 300ಕ್ಕೂ ಅಧಿಕ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮೈಸೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಬೆಂಗಳೂರು ಮತ್ತು ತುಮಕೂರು ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
ಮೈಸೂರು ವಿ.ವಿ ಸಾಧನೆ: ವಿವಿಧ ಸ್ಪರ್ಧೆಗಳಲ್ಲಿ ಮೈಸೂರು ವಿ.ವಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಪಟ್ಟ ಗಳಿಸಿ ಮೈಸೂರಿಗೆ ಕೀರ್ತಿ ತಂದಿದ್ದಾರೆ.
ಚರ್ಚಾಸ್ಪರ್ಧೆ: ಬಸವರಾಜ್ ಬಿಂಗಿ ಮತ್ತು ಹಿತೇಶ್ – ಪ್ರಥಮ
ರೇಡಿಯೋ ಜಾಕಿ: ರೂಪ – ದ್ವಿತೀಯ
ಫೋಟೋಗ್ರಫಿ: ಹಿತೇಶ್ ಮತ್ತು ರಕ್ಷಿತಾ – ಪ್ರಥಮ
ಪುಟ್ಟಕಥೆ ಮತ್ತು ಪಿ.ಟಿ.ಸಿ: ಇಂಚರ – ಪ್ರಥಮ
ಮ್ಯಾಡ್ ಆಡ್ (ಗುಂಪು ಸ್ಪರ್ಧೆ): ಸ್ಪಂದನಾ, ರಮೇಶ್, ಶಶಿ, ರಾಹುಲ್, ಚರಣ್ – ಪ್ರಥಮ
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಸಂಯೋಜಕರಾದ ಡಾ. ಸಂಜಯ್ ಬಿ.ಸಿ, ಸಂಶೋಧಕ ಅಭಿಷೇಕ್ ಪಾಳ್ಯಗಾರ್ ಅವರನ್ನು ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್. ಮಮತಾ ಹಾಗೂ ಪ್ರಾಧ್ಯಾಪಕರಾದ ಪ್ರೊ. ಎಂ.ಎಸ್. ಸಪ್ನಾ ಅಭಿನಂದಿಸಿದರು.
