ಮೈಸೂರು: ಮೈಸೂರಿನ ದಟ್ಟಗಳ್ಳಿಯಲ್ಲಿರುವ ಹಟ್ಟಿ ಇಡ್ಲಿ ಕೆಫೆ ಬಳಿ ಮೂರ್ನಾಲ್ಕು ದಿನಗಳಿಂದ ಡ್ರೈನೇಜ್ ಪಿಟ್ ಹೋಲ್ ಓಪನ್ ಆಗಿ, ಕಲುಷಿತ ನೀರು ರಸ್ತೆಯುದ್ದಕ್ಕೂ ಹರಿದು ರಾಡಿಯಾಗಿದೆ.
ಜತೆಗೆ ಕೆಟ್ಟ ವಾಸನೆ ಬೀರಿ ಸುತ್ತಮುತ್ತಲ ಜನರಿಗೆ ತುಂಬಾ ತೊಂದರೆ ಆಗಿದೆ,ಸಾರ್ವಜನಿಕರು ಈ ಭಾಗದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ.
ಸಂಬಂಧಪಟ್ಟವರು ಯಾರೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.ಇನ್ನು ಹಟ್ಟಿ ಇಡ್ಲಿ ಕೆಫೆಗೆ ಬರುವವರು ಹಾಗೂ ಅಲ್ಲಿನ ಸಿಬ್ಬಂದಿ ಗಬ್ಬು ವಾಸನೆ ತಡೆಯಲಾಗುತ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲೇ ಬೇಸಿಗೆಯ ಬಿಸಿಲಿನಲ್ಲಿ ಒದ್ದಾಡುತ್ತೇವೆ.ಈಗ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚು.ಅಂತಹುದರಲ್ಲಿ ಹೀಗೆ ಕೊಳಕು ನೀರು ಎಲ್ಲಾ ಕಡೆ ಹರಿದರೆ ನಾವು ರೋಗರುಜಿನಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಮಳೆ ಬಂದರೆ ಕೇಳಯವಂತೆಯೇ ಇಲ್ಲ,ಇನ್ನಷ್ಟು ರಾಡಿಯಾಗಿ,ಮನೆಗಳಿಗೂ ಕಲುಷಿತ ನೀರು ಹರಿಯುತ್ತದೆ,ಆದ್ದರಿಂದ ತಕ್ಷಣ ಈ ಡ್ರೈನೇಜ್ ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

