ಹುಣಸೂರು: ಬಿರುಗಾಳಿ ಮಳೆಗೆ ತಾಲ್ಲೂಕಿನ ಹನಗೋಡು ಹೋಬಳಿ, ವದ್ಲಿ ಮನುಗನಹಳ್ಳಿಯಲ್ಲಿ ಮನೆಯ ಚಾವಣಿಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿಹೋಗಿ ಕುಟುಂಬ ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಬುದ್ಧಿಮಾಂದ್ಯ ಪುಟ್ಟಸ್ವಾಮಿ ನಾಯಕ ಅವರು ಗ್ರಾಮದ ಹೊರವಲಯದ ತಮ್ಮ ಜಮೀನಿನಲ್ಲಿ ವಾಸದ ಮನೆ ನಿರ್ಮಿಸಿದ ದ್ದರು,ಆದರೆ ಬಿರುಗಾಳಿಗೆ ಸಿಲುಕಿ ಕಲ್ನಾರ್ ಶೀಟುಗಳು ಉದುರಿ ಹಾನಿಗೀಡಾಗಿದೆ.
ಇದರಿಂದ ಮನೆಯೊಳಗಿದ್ದ ದವಸ-ಧಾನ್ಯ, ಬಟ್ಟೆ ಮತ್ತಿತರ ಪದಾರ್ಥಗಳು ಹಾಳಾಗುತ್ತಿದೆ ಪುಟ್ಟಸ್ವಾಮಿ ನಾಯಕರ ಕುಟುಂಬಕ್ಕೆ ಸರ್ಕಾರ ಸೂಕ್ತ ನೆರವು ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಸ್ಥಳಕ್ಕೆ ಚಂದನ್ ಭೇಟಿ ನೀಡಿ ಪರಿಶೀಲಿಸಿದರು.
ಹಿರಿಯ ಅಧಿಕಾರಿಗಳಿಗೆ ಹಾನಿ ಕುರಿತು ವರದಿ ಕೊಟ್ಟಿದ್ದು,ಆದಷ್ಟೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಕೂಡಾ ಭೇಟಿ ನೀಡಿ ಸಾಂತ್ವನ ಹೇಳಿ,ಪುಟ್ಟಸ್ವಾಮಿ ಅವರಿಗೆ ವೈಯಕ್ತಿಕ ನೆರವು ನೀಡಿದ್ದಾರೆ.
ತಾಲೂಕು ಆಡಳಿತ ತಕ್ಷಣ ಸ್ಪಂದಿಸಿ ಈ ಮನೆಯವರಿಗೆ ನೆರವಾಗುವ ಅತ್ಯಗತ್ಯವಿದೆ.
