ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಲಕ್ಷ್ಮೀಪುರ ರಸ್ತೆಯಲ್ಲಿ ಮೈಸೂರಿನ ರೌಡಿಶೀಟರ್ ನನ್ನು ಬರ್ಬರ ಹತ್ಯೆ ಮಾಡಿದ್ದು,ಸ್ಥಳೀಯರು ಆತಂಕಗೊಂಡಿದ್ದಾರೆ.
ಮೈಸೂರಿನ ರೌಡಿ ಶೀಟರ್ ಸಾಹಿಲ್ ಆಲಿಯಾಸ್ ಚುವ್ವಾ ನನ್ನು ಕೊಲೆ ಮಾಡಲಾಗಿದೆ.
ಸಾಹಿಲ್ ನ ಸಹಚರರೇ ಹತ್ಯೆ ಮಾಡಿ, ರಸ್ತೆ ಬದಿಯ ಪೊದೆಯೊಂದರಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ.
ಒಂದು ತಿಂಗಳಿನಿಂದ ಈತ ಮೈಸೂರು,ಮಂಡ್ಯ ಕಡೆ ರಾತ್ರಿ ವೇಳೆ ಓಡಾಡಿಕೊಂಡಿದ್ದ. ಮೈಸೂರು ನಗರದ ಉದಯಗಿರಿ, ಎನ್.ಆರ್,ಮೊಹಲ್ಲ ಮಂಡಿ ಮೊಹಲ್ಲ, ವಿ.ವಿ ಪುರಂ ಹಾಗೂ ತುಮಕೂರು ಪೊಲೀಸ್ ಠಾಣೆಗಳಲ್ಲಿ 15 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಬೇಕಾಗಿದ್ದ ಅರೋಪಿ.
ಕಳೆದ 4-5 ವರ್ಷಗಳಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಬಂದಿದೆ.
ಸ್ಥಳಕ್ಕೆ ಎಸ್ಪಿ ಶೋಭಾರಾಣಿ, ಎಎಸ್ ಪಿ ಸಿ.ಇ ತಿಮ್ಮಯ್ಯ, ಟೌನ್ ಮತ್ತು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾಸಿದ್ದಾರೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
