ಮೈಸೂರು: ಬ್ರೈನ್ ಎಕ್ಸ್ ಯೋಗ ರಾಷ್ಟ್ರೀಯ ಬೌದ್ಧಿಕ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಬ್ರೈನ್ ಯೋಗ ಚಾಲೆಂಜ್ ಸ್ಕಾಲರ್ಶಿಪ್ ಪ್ರೀಮಿಯರ್ ಲೀಗ್ ಕರ್ನಾಟಕ 2026 ಸ್ಪರ್ಧೆಯ ಲೋಗೋ
ಹಾಗೂ ಫ್ಯಾಮಿಲಿ ಸ್ಕಾಲರ್ಶಿಪ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ಕೆ. ಹರೀಶ್ ಗೌಡ ಉದ್ಘಾಟಿಸಿದರು.
ಕೆ.ಎಂ.ಪಿ.ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜನಸ್ಪಂದನ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹರೀಶ್ ಗೌಡ ಅವರು, ಇಂದಿನ ಒತ್ತಡದ ಸಮಾಜದಲ್ಲಿ ಬ್ರೈನ್ ಯೋಗವು ಪ್ರತಿಯೊಬ್ಬರಿಗೂ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.
ಪೋಷಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಶಾಸಕರು, ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಲತಾ ಚಿಕ್ಕಣ್ಣ ಹಾಗೂ ಮಾಜಿ ಮಹಾಪೌರರಾದ ಮೋದಾಮಣಿ ಅವರು ಭಾಗವಹಿಸಿದ್ದರು.
ಸ್ತ್ರೀ ಶಕ್ತಿಯಿಂದ ಮನೋಶಕ್ತಿಯವರೆಗೆ ಎಂಬ ಆಶಯದೊಂದಿಗೆ ಆಯೋಜನೆ ಮಾಡಲಾಗಿದೆ.
ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಬೌದ್ಧಿಕ ವಿಕಸನಕ್ಕೆ ಪೂರಕವಾದ ಕಿಟ್ಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ ಎಂದು ಆಯೋಜಕರು ತಿಳಿಸಿದರು.
ಮೈಸೂರು ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಪುನೀತ್, ಪ್ರಚಾರಕರಾದ ಆಶಾ ಹಾಗೂ ಚಾಮರಾಜ ಕ್ಷೇತ್ರದ ವಿವಿಧ ಬ್ಲಾಕ್ಗಳ ಮಹಿಳಾ ಮುಖಂಡರು ಉಪಸ್ಥಿತರಿದ್ದರು.
