(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಗೆ ಸಾರ್ವತ್ರಿಕ ಚುನಾವಣೆ ನಡೆದು 6 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಪಟ್ಟಣದ ಗುರುಭವನದಲ್ಲಿ ಸಂಘದ ಆರು ನಿರ್ದೇಶಕ ಸ್ಥಾನಗಳಿಗೆ 5 ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ 15 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಆ ಪೈಕಿ 4 ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿ ಒಟ್ಟು 6 ಮಂದಿ ನಿರ್ದೇಶಕರುಗಳು ನೂತನವಾಗಿ ಆಯ್ಕೆಯಾಗಿದ್ದಾರೆ.
ಪುರುಷರ ವಿಭಾಗದಿಂದ ಲಿಂಗರಾಜು ಎನ್. 50 ಮತಗಳು, ನಾಗರಾಜು ಸಿ. 88 ಮತಗಳು, ನಾಗೇಶ್ ಎಂ. 110 ಮತಗಳು, ನಂದೀಶ್ ಕೆ. 93 ಮತಗಳು, ರಾಜು ಆರ್, 91ಮತಗಳು, ಸಿದ್ದರಾಜು ಬಿ. 66 ಮತಗಳು, ಶಿವಕುಮಾರ್ ಎಂ. 48. ಮತಗಳು, ಶಿವಶಂಕರ ಎನ್. 111 ಮತಗಳು, ಶ್ರೀಧರ 89 ಮತಗಳು, ಸುರ್ಜೇಸ್ ಎಸ್. 60 ಮತಗಳು, ಉಮೇಶ್ ಎಂ. 181 ಮತಗಳು ಹಾಗೂ ಮಹಿಳೆಯರ ವಿಭಾಗದಿಂದ ಪುಟ್ಟಮಾದಮ್ಮ ಜಿ. 121 ಮತಗಳು, ಸವಿತಾ ಪಿ ಕೆ ಎಸ್. 181 ಮತಗಳು, ಸಾವಿತ್ರಮ್ಮ ಬಿ. 115 ಮತಗಳು, ಶಬಾನ ಭಾನು. 82 ಮತಗಳನ್ನು ಪಡೆದು ಕೊಂಡಿದ್ದಾರೆ.
ಇವರಲ್ಲಿ ಉಮೇಶ್ ಎಂ.181 ಮತಗಳು, ಶಿವಶಂಕರ ಎನ್. 111 ಮತಗಳು, ನಾಗೇಶ್ ಎಂ. 110 ಮತಗಳು, ನಂದೀಶ್ ಕೆ. 93 ಮತಗಳು ಪುಟ್ಟಮಾದಮ್ಮ ಜಿ. 121 ಮತಗಳು, ಸವಿತಾ ಪಿ ಕೆ ಎಸ್. 181 ಮತಗಳು. ಇವರನ್ನು ಚುನಾವಣಾಧಿಕಾರಿಗಳು ಅಂತಿಮವಾಗಿ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ನೂತನ ನಿರ್ದೇಶಕರುಗಳನ್ನು ಕೊಳ್ಳೇಗಾಲ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅಲೆಕ್ಸಾಂಡರ್ ಅವರು ಅಭಿನಂದಿಸಿದ್ದಾರೆ.
