ಮೈಸೂರು: ಮೈಸೂರಿನ ಹಳೆ ಬಂಡಿಕೇರಿಯಲ್ಲಿರುವ ಪುರಾತನ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ವಿಜೃಂಭಣೆಯಿಂದ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿತು
ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಶಾಸಕ ಹರೀಶ್ ಗೌಡರು ಭಾಗಿಯಾಗಿ ಸ್ವಾಮಿಯ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಶಾಸಕರು,
ಸಂಸ್ಕೃತಿಯ ಪ್ರತೀಕವಾದ ಮಠಮಾನ್ಯಗಳು ಹಾಗೂ ದೇವಾಲಯಗಳು,ಮನುಷ್ಯನಿಗೆ ಸುಖ ,ಶಾಂತಿ ,ನೆಮ್ಮದಿ ಕರುಣಿಸುವ ಶ್ರದ್ಧಾ
ಕೇಂದ್ರಗಳಾಗಿವೆ ಎಂದು ಹೇಳಿದರು.
ಸಂಸ್ಕೃತಿ ಪರಂಪರೆಯು ಶ್ರೀಮಂತ ಕೊಡುಗೆಯಾಗಿದ್ದು, ಮಠಮಾನ್ಯಗಳು ಹಾಗೂ ದೇವಾಲಯಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುವ ಮೂಲಕ ಆತನ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕರುಣಿಸುವ ಕ್ಷೇತ್ರಗಳಾಗಿವೆ ಎಂದು ತಿಳಿಸಿದರು.
ಸನಾತನ ಸಂಸ್ಕೃತಿಯ ಮಠಮಾನ್ಯಗಳು ಹಾಗೂ ದೇವಾಲಯಗಳನ್ನು ಉಳಿಸಿ ಬೆಳೆಸುವ ಜತೆಗೆ ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಧಾರ್ಮಿಕ ಸಮಾರಂಭಗಳು ಸೂಕ್ತ ವೇದಿಕೆ. ನಮ್ಮಲ್ಲಿನ ಆತ್ಮಜ್ಞಾನ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಹರೀಶ್ ಗೌಡ ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸದಸ್ಯರಾದ ರಾಮು, ರಾಧಾಕೃಷ್ಣ ,ರಾಘವನ್ ವೆಂಕಟೇಶ, ನವೀನ್, ಭಾರ್ಗವ ಸುಬ್ಬು ,ನರೇಂದ್ರ, ವಿನುತ್, ಮನೋಜ್ ಮುಂತಾದವರು ಹಾಜರಿದ್ದರು.
