ಮೈಸೂರು: ಒಂದು ಒಳ್ಳೆ ಕೆಲಸ ಮಾಡಿದರೆ ಮನಸ್ಸಿಗೆ ಸಂತೋಷ ಸಮಾಧಾನ ಸಿಗಲಿದೆ ಎಂದು ಗುರುಕುಲದ ಶ್ರೀ ಡಾ. ಬೆ ನಾ ವಿಜೇಂದ್ರ ಆಚಾರ್ಯ ಗುರುಗಳು ತಿಳಿಸಿದರು.
ಮೈಸೂರಿನ ಜಯನಗರದಲ್ಲಿರುವ ಅಂಬ್ರಾಣಿ ಗುರುಕುಲದ ವಿದ್ಯಾರ್ಥಿನಿಯರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಡ್ರೈ ಫ್ರೂಟ್ಸ್, ಹಣ್ಣು ಹಂಪಲು ವಿತರಿಸುವ ಸೇವಾ ಕಾರ್ಯ
ಹಮ್ಮಿಕೊಂಡಿದ್ದ ವೇಳೆ ಶ್ರೀ ಡಾ. ಬೆ ನಾ ವಿಜೇಂದ್ರ ಆಚಾರ್ಯ ಗುರುಗಳು ಮಾತನಾಡಿದರು.
ಮೋಡ ನೋಡಿ ಸಮುದ್ರ ನೋಡಿ ಇದು ಸುಭಾಷಿತ. ಮೋಡ ನೀರನ್ನು ದಾನ ಮಾಡಿ ಮಾಡಿ ( ಮಳೆಯ ಮೂಲಕ ) ಮೇಲೆ ಇರುತ್ತದೆ.ಸಮುದ್ರ ನೀರನ್ನು ಕೊಡದೆ ( ಉಪ್ಪು ನೀರಲ್ಲವ ) ಕೆಳಗೆ ಇರುತ್ತದೆ.
ದಾನ ಮಾಡಿದಷ್ಟು ನಿಮ್ಮ ಸ್ಥಾನ ಮೇಲೆ ಜಿಪುಣತನ ಮಾಡಿದಷ್ಟು ಕೆಳಗಿನ ಸ್ಥಾನ ಎಂದು ತಿಳಿಹೇಳಿದರು.
ದಾನ ಮಾಡಿದರೆ ಎಲ್ಲಿಯತನಕ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂದು ಕಲ್ಪನೆಯೂ ಇಲ್ಲ,ಮನುಷ್ಯನಾಗಿ ಹುಟ್ಟಿದ ಮೇಲೆ ಸನ್ಮಾರ್ಗದಲ್ಲಿ ನಡೆಯಿರಿ,ದಾನ ಧರ್ಮದಲ್ಲಿ ತೊಡಗಿಕೊಳ್ಳಿ ಎಂದು ಗುರುಗಳು ಕರೆ ನೀಡಿದರು.
ಸತ್ಕಾರ್ಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸ್ನೇಹ ಬಳಗದ ಸದಸ್ಯರನ್ನು ಆಶೀರ್ವದಿಸಿದರು.
ಜೆಡಿಎಸ್ ಮುಖಂಡ ಪ್ರಕಾಶ್ ಪ್ರಿಯಾದರ್ಶನ್ ಮಾತನಾಡಿ, ವಿವಿಧ ಜಿಲ್ಲೆಗಳಿಂದ ಆಗಮಿಸಿ ಗುರುಕುಲದಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳೆಲ್ಲರೂ ಅತ್ಯಂತ ಪ್ರತಿಭಾನ್ವಿತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿದಿನ ರಾಮಾಯಣ ಮಹಾಭಾರತವನ್ನು ನಾಲ್ಕು ಐದು ಗಂಟೆಗಳ ಕಾಲ ಅಧ್ಯಯನ ಮಾಡುವುದರ ಜೊತೆಗೆ ಹೊರಗಿನ ಶಾಲೆಯಲ್ಲಿ ಓದಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿನಿಯರು 94 / 95 ಪರ್ಸೆಂಟೇಜ್ ಅಂಕಗಳನ್ನು ಪಡೆಯುವ ಮೂಲಕ ಅಂಬ್ರಾಣಿ ಗುರುಕುಲಕ್ಕೆ ಕೀರ್ತಿ ತಂದಿದ್ದಾರೆ ಜೊತೆಯಲ್ಲಿ ಸಂಗೀತ, ನೃತ್ಯ, ಸನಾತನ ಧರ್ಮದ ಎಲ್ಲಾ ಮಜಲುಗಳನ್ನು ಕರಗತ ಮಾಡಿಕೊಳ್ಳುವ ಮೂಲಕ ಧರ್ಮ ಸಂರಕ್ಷಣೆ ಮಾಡಲು ಪಣತೊಟ್ಟಿರುವ ಈ ಎಲ್ಲಾ ಹೆಣ್ಣು ಮಕ್ಕಳ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬ್ಲಡ್ ಆನ್ ಕಾಲ್ ಕ್ಲಬ್, ಮೈಸೂರು ಸಂಸ್ಥಾಪಕ ದೇವೇಂದ್ರ ಪರಿಹಾರಿಯಾ, ಸಮಾಜ ಸೇವಕಿ ವಿದ್ಯಾ, ಸಹನ,ರಾಜೇಶ್ ಕುಮಾರ್,ಮಹೇಶ, ದತ್ತ ಮತ್ತಿತರರು ಹಾಜರಿದ್ದರು.
