ಪಾಕಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ತಾಮ್ರ ಮತ್ತು ಚಿನ್ನದ ಗಣಿಗಾರಿಕೆ ಸ್ಥಳದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು 10 ಕಾರ್ಮಿಕರು ಮೃತಪಟ್ಟಿದ್ದಾರೆ.
ನ್ಯಾಷನಲ್ ರಿಸೋರ್ಸಸ್ ಲಿಮಿಟೆಡ್ ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಡೆಸುವ ಚಾಗೈ ಜಿಲ್ಲೆಯ ದರಿಗ್ವಾನ್ ನಲ್ಲಿ ಭಯೋತ್ಪಾದಕರು ಈ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಟರ್ಕಿಶ್ ಪ್ರಜೆ, 6 ಕಾರ್ಮಿಕರು ಮತ್ತು ಮೂವರು ಕಾವಲುಗಾರರು ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾತಿಗಳು ತಿಳಿಸಿದ್ದಾರೆ.
ಕಾರ್ಮಿಕರು ತಮ್ಮ ಪಾಳಿಯನ್ನು ಮುಗಿಸುವ ವೇಳೆಯೇ ಈ ದಾಳಿ ನಡೆದಿದೆ. ಇದು ಟಾರ್ಗೆಟ್ ಮಾಡಿ ನಡೆಸಲಾದ ದಾಳಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
