ಮೈಸೂರು: ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು, ದೊಡ್ಡ ಹರವೆ ಬಳಿ ನಡೆದಿದೆ.
ಪಿರಿಯಾಪಟ್ಟಣದಲ್ಲಿ ಟೈಲ್ಸ್ ಮತ್ತು ಪೇಂಟಿಂಗ್ ಕೆಲಸ ಮಾಡುವ ನಾಲ್ವರು ಭಾನುವಾರ ಮಧ್ಯಾಹ್ನ ನದಿಗೆ ಈಜಲು ಹೋಗಿದ್ದಾರೆ.
ನದಿಯಲ್ಲಿ ಈಜಲು ಹೋದ ಸಂದರ್ಭದಲ್ಲಿ ಇಮ್ರಾನ್ ಮುಳುಗುತ್ತಿದ್ದನ್ನು ಕಂಡು ಆತನನ್ನು ರಕ್ಷಿಸಲು ಗಣೇಶ್ ಹೋಗಿದ್ದಾನೆ.
ಪಿರಿಯಾಪಟ್ಟಣದ ಶಿವಮೂರ್ತಿ ಅವರ ಮಗ ಗಣೇಶ (೨೨) ಮತ್ತು ಕೆ. ಎಂ. ಬಡಾವಣೆ ನಿವಾಸಿ ಶತಾಜ್ ಎಂಬವರ ಮಗ ಇಮ್ರಾನ್ (೨೮) ಮೃತಪಟ್ಟಿದ್ದಾರೆ.
ಈ ಸಂಬಂಧ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಳುಗು ತಜ್ಞರಿಂದ ಗಣೇಶನ ಮೃತದೇಹ ಹೊರತೆಗೆಯಲಾಗಿದ್ದು, ಇಮ್ರಾನ್ ಶವ ಪತ್ತೆಯಾಗಿರಲಿಲ್ಲ.
