ಮೈಸೂರು: ಮೈಸೂರಿನ
ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಮಾಜದ ಸಭೆಗೆ ಆಕಾಶವಾಣಿ ಕಲಾವಿದೆ ಕಣ್ಣೂರು ಭಾಗ್ಯಲಕ್ಷ್ಮಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದುದು ವಿಶೇಷ.
ಈ ವೇಳೆ ಅವರು ಸಮಾಜದ ಸದಸ್ಯರಿಗೆ ಅರ್ಥಪೂರ್ಣವಾದ ಹಾಡುಗಳನ್ನು ಹೇಳಿಕೊಟ್ಟರು ಜತೆಗೆ ಶುಶ್ರಾವ್ಯವಾಗಿ ಲಾವಣಿ ಹಾಡುಗಳನ್ನು ಹಾಡಿ ಮನರಂಜಿಸಿದರು.
ನಂತರ ಭಾಗ್ಯಲಕ್ಷ್ಮಿ ಅವರಿಗೆ ಸಮಾಜದ ವತಿಯಿಂದ ಸನ್ಮಾನ ಮಾಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ವಿಜಯ ಮಂಜುನಾಥ ಹಾಗೂ ಪದಾಧಿಕಾರಿಗಳಾದ ಮಂಗಳ ಮಂಜುನಾಥ್, ಚಾಂದಿನಿ, ಸುವರ್ಣ ಗಣೇಶ್, ಇಂದಿರಾ, ಜಯಶ್ರೀ ರಮೇಶ್, ಶಾರದ, ಯೋಗ ಶ್ರೀ, ಚಂದ್ರಕಲಾ, ಮಮತಾ, ಮಾಲತಿ ಮತ್ತಿತರರು ಉಪಸ್ಥಿತರಿದ್ದರು.
