ಕೈವ್: ಉಕ್ರೇನ್ ರಾಜಧಾನಿ ಕೈವ್ ನಗರದಲ್ಲಿ ದುಷ್ಕರ್ಮಿ ನಡೆಸಿದ ಗುಂಡಿನ ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದಾರೆ.
ಕೈವ್ ನಗರದ ಸೂಪರ್ ಮಾರ್ಕೆಟ್ನಲ್ಲಿ ಬಂದೂಕುಧಾರಿಯೊಬ್ಬ ಏಕಾಏಕಿ ಗುಂಡು ಹಾರಿಸಿ 5 ಜನರನ್ನು ಕೊಂದಿದ್ದಾನೆ.ಜತೆಗೆ ದಾಳಿ ವೇಳೆ ಕೆಲವರು ಗಾಯಗೊಂಡಿದ್ದಾರೆ.
ದಾಳಿಯ ನಂತರ ದಾಳಿಕೋರ ಹಲವರನ್ನು ಗನ್ ಪಾಯಿಂಟ್ ನಲ್ಲಿ ಸೂಪರ್ಮಾರ್ಕೆಟ್ನೊಳಗೆ ಒತ್ತೆಯಾಳಾಗಿರಿಸಿಕೊಂಡಿದ್ದ.
ತಕ್ಷಣ ಸ್ಥಳಕ್ಕೆ ದಾವಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ದಾಳಿಕೋರ ಪೊಲೀಸರ ಮೇಲೆಯೇ ಪ್ರತಿ ದಾಳಿ ಮಾಡಿದ.ಕಡೆಗೆ ಗುಂಡೇಟಿಗೆ ಬಲಿಯಾಗಿದ್ದಾನೆ.
