ಮೈಸೂರು: ತಡರಾತ್ರಿ ಒಂಟಿಯಾಗಿ ಬರುತ್ತಿದ್ದ ಮಂಗಳಮುಖಿಯನ್ನ ನಾಲ್ವರು ದುಷ್ಕರ್ಮಿಗಳು ಬಲವಂತವಾಗಿ ಆಟೋದಲ್ಲಿ ಕಿಡ್ನಾಪ್ ಮಾಡಿ ಲೈಂಗಿಕ ಕಿರುಕುಳ ನೀಡಿದ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಮಶಾನದ ಬಳಿ ಈ ಘಟನೆ ನಡೆದಿದ್ದು,ಗೀತಾ (ಹೆಸರು ಬದಲಿಸಿದೆ)ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಂಗಳಮುಖಿ.
ಏ.16 ರಂದು ಸ್ನೇಹಿತರೊಬ್ಬರ ಬಳಿ ಪಡೆದಿದ್ದ ಸಾಲದ ಹಣ ಹಿಂದಿರುಗಿಸಿ ತನ್ನ ಮನೆಗೆ ಒಂಟಿಯಾಗಿ ವಾಪಸ್ ಬರುತ್ತಿದ್ದ ಗೀತಾಳನ್ನ ನಾಲ್ವರು ಯುವಕರು ಗಮನಿಸಿ,ಏಕಾಏಕಿ ಆಟೋ ಒಳಗೆ ಹಾಕಿಕೊಂಡು ಹೊತ್ತೊಯ್ದಿದ್ದಾರೆ.
ಎಷ್ಟೇ ಕೂಗಾಡಿದರೂ ಬಿಡದೆ ಗೀತಾಳೊಂದಿಗೆ ಅಸಭ್ಯವಾಗಿ ನಡೆದುಕೊಂಡು,ಅಲ್ಲಿಂದ ರಿಂಗ್ ರಸ್ತೆಯ ಕಾಲೇಜೊಂದರ ಬಳಿ ಕರೆದೊಯ್ದು ದೈಹಿಕವಾಗಿ ಹಿಂಸೆ ನೀಡಿದ್ದಾರೆ.
ಈ ವೇಳೆ ವ್ಯಕ್ತಿಯೊಬ್ಬರು ಬೈಕ್ ನಲ್ಲಿ ಬರುತ್ತಿದ್ದದನ್ನ ಕಂಡ ಖದೀಮರು ಗೀತಾಳನ್ನ ಬಿಟ್ಟು ಪರಾರಿಯಾಗಿದ್ದಾರೆ.
ಬೈಕ್ ಸವಾರನ ನೆರವಿನಿಂದ ಮನೆ ತಲುಪಿದ ಗೀತಾ ನಂತರ ತಮ್ಮ ಮನೆಯವರ ಜೊತೆ ಮಾತನಾಡಿ ಚರ್ಚಿಸಿ ಕೆ ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೇಟಗಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೂಡಲೇ ಎಚ್ಚೆತ್ತ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲಿ ನಾಲ್ವರು ಆರೋಪಿಗಳ ಪೈಕಿ
ಪವನ್,ಸುಶೀಲ್ ಹಾಗೂ ಹರ್ಷ ಎಂಬ
ಮೂವರನ್ನ ಬಂಧಿಸಿದ್ದಾರೆ.ಮತ್ತೊಬ್ಬ ಮುರಳಿ ಬಂಧನಕ್ಕೆ ಬಲೆ ಬೀಸಿದ್ದಾರೆ.
