ಮೈಸೂರು: ಸಮಾನ ಸಮಾಜ ನಿರ್ಮಾಣ ಮಾಡಬೇಕಾದರೆ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಚಾಚೂ ತಪ್ಪದೇ ಪಾಲಿಸುವುದು ಅತ್ಯಗತ್ಯ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ.ಅಬ್ದುಲ್ ರಹಿಮಾನ್ ಎಂ ತಿಳಿಸಿದರು.
ಕಾಲೇಜಿನ ಆಡಿಯೋ ವಿಶ್ವದಲ್ಲಿ ಸಾಂಸ್ಕೃತಿಕ ಸಮಿತಿ ಏರ್ಪಡಿಸಿದ್ದ ಅಂಬೇಡ್ಕರ್ ಅವರ 135 ನೇ ಜನ್ಮದಿನೋತ್ಸವದ ಆಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಜಾತಿ ರಹಿತ,ವರ್ಗರಹಿತ, ತಾರತಮ್ಯ ರಹಿತ ಸಮಾನ ಸಮಾಜ ನಿರ್ಮಾಣ ಅಂಬೇಡ್ಕರ್ ಅವರ ಕನಸಾಗಿತ್ತು.ಅದಕ್ಕಾಗಿ ಅವರು ಸಂವಿಧಾನವನ್ನು ರಚಿಸಿದರು ಎಂದು ಹೇಳಿದರು.
ಸಂವಿಧಾನದಲ್ಲಿ ಇರುವ ತತ್ವಗಳು ಸಮಾನ ಸಮಾಜದ ಆಶಯಗಳನ್ನು ಹೊತ್ತಿವೆ. ಹಾಗಾಗಿ, ಸಂವಿಧಾನದ ತತ್ವಗಳನ್ನು ಪಾಲಿಸಿದರೆ ಮಾತ್ರವೇ ಅಂಬೇಡ್ಕರ್ ಅವರು ಕನಸಿನ ಸಮಾನ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ತಾರತಮ್ಯಕ್ಕೆ ಒಳಗಾಗಿ ನೋವು ಹಾಗೂ ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಿದ ಅಂಬೇಡ್ಕರ್ ಅವರು, ಅಂತಹುದೇ ಕಷ್ಟಗಳನ್ನು ದೇಶದ ಜನರು ಅನುಭವಿಸಬಾರದು ಎಂಬ ಕಾರಣಕ್ಕಾಗಿ ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿ ಹಲವಾರು ಅವಕಾಶಗಳನ್ನು ವಂಚಿತ ಸಮುದಾಯಕ್ಕೆ ನೀಡಿದರು.
ಹೀಗೆ ನೀಡುವ ಮೂಲಕ ಶೋಷಣೆಗೆ ಒಳಗಾದ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸಹಾಯವಾಗುವಂತೆ ಅವಕಾಶ ಕಲ್ಪಿಸಿದರು. ಹಾಗಾಗಿ ಇದನ್ನು ಅರಿತು ಎಲ್ಲ ಸಮಾಜ ಒಳಗೊಳ್ಳುವಂತೆ ಅವಕಾಶ ಪಡೆದ ಸಮುದಾಯಗಳು ಜೀವನ ನಡೆಸಬೇಕು ಎಂದು ಪ್ರಾಂಶುಪಾಲರು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಲೇಜಿನ ರೇಷ್ಮೆಕೃಷಿ ಪ್ರಾಧ್ಯಾಪಕ ಎಂ. ಎನ್. ಶ್ರೀನಿವಾಸ್,ಸಂವಿಧಾನ ಸಂಪೂರ್ಣ ಜಾರಿಯಾದರೆ ಸಮಾನತೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು ಸುಮಾರು 75 ವರ್ಷಕ್ಕೂ ಹೆಚ್ಚು ಕಾಲವಾದರೂ ಇಂದಿಗೂ ಅಸಮಾನತೆ ತಂಡ ವವಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ತಾರತಮ್ಯ ಇದೆ. ಅಂದರೆ, ಸಮಾನತೆ ಇಂದಿಗೂ ಸಾಧ್ಯವಾಗಿಲ್ಲ ಎಂಬುದು ವೇದ್ಯವಾಗುತ್ತದೆ. ಇದು ತೊಲಗಬೇಕು ಎಂದರೆ ಸಂವಿಧಾನ ಸಂಪೂರ್ಣ ಜಾರಿಯಾಗಬೇಕು ಎಂದು ಹೇಳಿದರು.
ಸಮಾಜ ಇಬ್ಬಗೆಯ ನೀತಿ ಅನುಸರಿಸುತ್ತದೆ. ಅಡುವ ನುಡಿ, ಆಚರಣೆ ಮಾಡುವ ರೀತಿ ಎರಡೂ ಭಿನ್ನ. ಇದು ಜಾತೀಯತೆಯನ್ನು ದ್ವಿಗುಣಗೊಳಿಸುತ್ತಿದೆ. ಹಾಗಾಗಿ, ಮೂಲಭೂತವಾಗಿ, ಮನುಷ್ಯನ ಮನಪರಿವರ್ತನೆ ಆಗಬೇಕು, ಎಂದು ತಿಳಿಸಿದರು.
ಜಗತ್ತಿನ ಆದರ್ಶ ಮಹಾ ಪುರುಷ ಅಂಬೇಡ್ಕರ್ ಎಂದು ಕಾಲೇಜಿನ ಶೈಕ್ಷಣಿಕ ಡೀನ್ ಪ್ರಾಧ್ಯಾಪಕ ಶ್ರೀಪಾದ್ ಬಣ್ಣಿಸಿದರು.
ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಕೀರ್ತನಾ ಜಿ ಮಾತನಾಡಿ,ಮುಂದುವರಿದ ರಾಷ್ಟ್ರಗಳು ಅನುಸರಿಸಲು ತವಕ ಪಡುವ ಸಂವಿಧಾನ ನೀಡಿದ ಮಹನೀಯ ಅಂಬೇಡ್ಕರ್ ಎಂದು ತಿಳಿಸಿದರು.
ಪತ್ರಾoಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್ ಮಾತನಾಡಿದರು.ಅಧ್ಯಾಪಕ ಡಾ. ರಮೇಶ ಕೆ. ಎಲ್ ಅಂಬೇಡ್ಕರ್ ಕುರಿತು ಗೀತೆ ಹಾಡಿದರು.
ಕ್ರೀಡಾ ಕಾರ್ಯದರ್ಶಿ ಲಕ್ಷ್ಮೀ ಕೆ. ಎಸ್ ಕಾರ್ಯಕ್ರಮ ನಿರೂಪಿಸಿದರು. ರಮ್ಯಾ ಡಿ, ಸ್ವಾಗತಿಸಿದರು, ಪೂಜಿತಾ ಜೆ ವಂದಿಸಿದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಗೋವಿಂದರಾಜು, ಖಜಾಂಚಿ ಶ್ರೀಮತಿ ಬೃಂದಾ ಎನ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಬೃಂದಾ ಎ,
ವಿದ್ಯಾರ್ಥಿ ಸಂಸತ್ತಿನ ಪೂಜಾ ಎಸ್,
ತೇಜಸ್ವಿನಿ ಎಚ್.ವಿ,ನವ್ಯಶ್ರೀ ಎನ್,
ಮಮತಾ ಎಂ ಯತ್ನಟ್ಟಿ,
ಜರೀನಾ ಜೆ,ಅಮೃತಾ ಟಿ.ಎಚ್, ಸಂಜನಾ ಮತ್ತು ಸಂಜನಾ, ಆಫ್ರಿನ್,
ಎನ್. ಸಿ. ಸಿ, ಎನ್. ಎಸ್. ಎಸ್, ರೆಂಜರ್ಸ್, ಕ್ರೀಡೆ ಪದಾಧಿಕಾರಿಗಳು, ಅಧ್ಯಾಪಕರು ಅಧ್ಯಾಪಕೇತರ , ವಿದ್ಯಾರ್ಥಿಗಳು ಹಾಜರಿದ್ದರು.
