ಮೈಸೂರು: ಭಕ್ತ ಕನಕ ಪರಂಪರೆಯ ಹಿರಿಯ ಸಂತರು, ಕಾಗಿನೆಲೆ ಮಹಾಸಂಸ್ಥಾನ ಮಠದ ಜಗದ್ಗುರುಗಳಾದ ಪೂಜ್ಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಗಳ ಜನ್ಮದಿನದ ಅಂಗವಾಗಿ ಮೈಸೂರು ಯುವ ಬಳಗದ ವತಿಯಿಂದ ಜನರಿಗೆ ಎಳನೀರು ವಿತರಿಸಲಾಯಿತು.
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯ ಶಾಲೆಯ ವೃತ್ತದಲ್ಲಿ ಶಾಸಕ ಹರೀಶ್ ಗೌಡ ಅವರು ಸಾರ್ವಜನಿಕರಿಗೆ ಉಚಿತ ಎಳನೀರು ಹಾಗೂ ಸಿಹಿ ವಿತರಿಸಿದರು.ಈ ಮೂಲಕ
ಶ್ರೀಗಳ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಹರೀಶ್ ಗೌಡ ಅವರು,ಕಾಗಿನೆಲೆಯ ಆದಿಕೇಶವನು ಪೂಜ್ಯ ಶ್ರೀಗಳಿಗೆ ಉತ್ತಮ ಆರೋಗ್ಯ ಹಾಗೂ ಸುದೀರ್ಘ ಆಯಸ್ಸು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಪೂಜ್ಯ ಶ್ರೀಗಳ ಮಾರ್ಗದರ್ಶನ ಹಾಗೂ ಅವರ ಆಶೀರ್ವಾದ ನಮ್ಮ ನಾಡಿನ ಮೇಲೆ ಸದಾ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರವಿಚಂದ್ರ, ನವೀನ,ನಾಗಣ್ಣ, ಮಹದೇವ್, ಸುಬ್ರಹ್ಮಣ್ಯ,ಮಂಗಳ, ಶಾಂತ,ಅಭಿಷೇಕ್ ಶಿವಣ್ಣ, ಹೇಮಂತ,ಲೋಕೇಶ್, ಶ್ರೀಕಾಂತ್ ಮಂಜುನಾಥ,ಪಾಪು, ಎಸ್ ಎನ್ ರಾಜೇಶ್, ಸುರೇಶ,ಮನು ನಾಯಕ್, ಹರ್ಷ, ಚಂದು, ಸುಜಲ್, ರಾಕೇಶ್, ರಘು ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
