ಮೈಸೂರು: ಭಾರತದಲ್ಲಿ ನಡೆದ ನಕ್ಸಲರ ರಕ್ತಸಿಕ್ತ ಅಧ್ಯಾಯವು ಕೊನೆಗೂ ಅಂತ್ಯಗೊಂಡಿರುವುದು ದೇಶಕ್ಕೆ ಹರ್ಷ ತರುವ ಸಂಗತಿಯಾಗಿದೆ ಎಂದು ಬಿಜೆಪಿ ಮುಖಂಡರಾದ ಡಾ ಹೇಮನಂದೀಶ್ ಹೇಳಿದ್ದಾರೆ.
ಹಲವು ದಶಕಗಳ ಕಾಲ ದೇಶದಲ್ಲಿ ವ್ಯಾಪಿಸಿದ್ದ ನಕ್ಸಲ್ ಚಟುವಟಿಕೆಯನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮುಕ್ತಗೊಳಿಸಿದೆ. ಈ ಮಹತ್ತರ ಸಾಧನೆಗೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಮಾ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
1959ರಲ್ಲಿ ಬಡವರ, ಶೋಷಿತರ ಪರ ಎಂಬ ಸೋಗಿನಲ್ಲಿ ಆರಂಭವಾದ ಈ ನಕ್ಸಲ್ ಚಳವಳಿ, ದಿನಗಳೆದಂತೆ
ದೇಶದಲ್ಲಿ ರಕ್ತಸಿಕ್ತ ಅಧ್ಯಾಯವಾಗಿ ರೂಪುಗೊಂಡಿತು.
57 ವರ್ಷ ನಡೆದು ಬಂದ ಈ ಚಳವಳಿಗೆ ಕಾಂಗ್ರೆಸ್ ಬೆಂಬಲ ಕೊಟ್ಟಿದ್ದನ್ನು ನೋಡಿದ್ದೇವೆ. ನಕ್ಸಲ್ ಹಿಂಸಾಚಾರದಲ್ಲಿ 5 ಸಾವಿರ ಯೋಧರು, 15 ಸಾವಿರ ಅಮಾಯಕ ನಾಗರಿಕರು ಬಲಿಯಾಗಿದ್ದು ನೋವಿನ ಸಂಗತಿ ಎಂದಿದ್ದಾರೆ.
‘ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರವು ಬ್ಯಾಂಕಿಂಗ್, ರಸ್ತೆ ಸಂಪರ್ಕ, ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಮೂಲಕ ನಕ್ಸಲ್ ವಾದವನ್ನು ನಿರ್ಮೂಲನೆ ಮಾಡಿದೆ. ಆದರೆ, ಇವರನ್ನೆಲ್ಲ ಬೆಂಬಲಿಸುವ ನಗರ ನಕ್ಸಲ್ ಮನಸ್ಥಿತಿ ಇವತ್ತಿಗೂ ಇದೆ. ಇದರ ವಿರುದ್ಧವೂ ದೊಡ್ಡಮಟ್ಟದ ಕಾರ್ಯ ಆಗಬೇಕಾಗಿದೆ ಎಂದು ಹೇಮಾ ನಂದೀಶ್ ಮಾರ್ಮಿಕವಾಗಿ ಹೇಳಿದ್ದಾರೆ.
