ಮೈಸೂರು: ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೆ ಎಮ್ ಪಿ ಕೆ ಚಾರಿಟಬಲ್ ಟ್ರಸ್ಟ್ ಮತ್ತು ಬ್ಲಡ್ ಆನ್ ಕಾಲ್ ಕ್ಲಬ್
ವತಿಯಿಂದ ಏಪ್ರಿಲ್ 5ರಂದು
ನಗರದ ರೈಲ್ವೆ ನಿಲ್ದಾಣ ಮುಂಭಾಗ ಜೆ ಕೆ ಆಡಿಟೋರಿಯಂ ಆವರಣದಲ್ಲಿ ರಕ್ತದಾನಿಗಳ ಹಬ್ಬ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ 15 ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ 300ಕ್ಕೂ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಸನ್ಮಾನಿಸುವ ಮೂಲಕ ರಕ್ತದಾನಿಗಳ ಹಬ್ಬವನ್ನು ಆಚರಿಸುತ್ತಿರುವುದು ವಿಶೇಷ.
ಈ ಕಾರ್ಯಕ್ರಮದ ಕುರಿತು ರಕ್ತದಾನದ ಜಾಗೃತಿಯ ಪೋಸ್ಟರ್ ಅನ್ನು ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿ ಆಶೀರ್ವಾದ ನೀಡಿದರು.
ರಕ್ತದಾನ ಅತ್ಯಂತ ಶ್ರೇಷ್ಠದಾನ
ರಕ್ತವು ಜೀವ ರಕ್ಷಕ ಸಾಧನ. ನಾವು ನೀಡುವ ರಕ್ತವು ಜೀವ ಒಂದನ್ನು ಉಳಿಸಬಲ್ಲದು,
ಸಕಾಲದಲ್ಲಿ ರಕ್ತ ದಾನ ಮಾಡುವುದರಿಂದ ಸಾಮಾನ್ಯ ಮನುಷ್ಯರಿಗೂ ಇತರರ ಜೀವ ಉಳಿಸಲು ಸಾಧ್ಯವಿದೆ ಶ್ರೀಗಳು ತಿಳಿಸಿದರು.
ಕಾಲ ಕಾಲಕ್ಕೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಸಾರ್ಥಕತೆಯ ಜೊತೆಗೆ ನಮ್ಮ ಆರೋಗ್ಯವೂ ವೃದ್ಧಿಸುತ್ತದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದ ಕಾರಣ ರಕ್ತ ದಾನಿಗಳಿಂದಲೇ ರಕ್ತದ ಪೂರೈಕೆ ಆಗಬೇಕಾಗಿದೆ.
ಈ ನಿಟ್ಟಿನಲ್ಲಿ ನಾವೆಲ್ಲರೂ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಶ್ರೀಗಳು ಕರೆ ನೀಡಿದರು.
ರಕ್ತದಾನ ಮಾಡಲು ದೊಡ್ಡ ಮನಸ್ಸಿದ್ದರೆ ಸಾಕು, ಇತರರ ನೋವು ನಲಿವು, ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ನಿರಂತರ ರಕ್ತದಾನ ಮಾಡಿದಲ್ಲಿ ಸಮಾಜದ ಸ್ವಾಸ್ಥ್ಯ ವೃದ್ಧಿಸುತ್ತದೆ ಎಂದು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ,ರಕ್ತ ದಾನಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 15 ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ದಾನಿಗಳಿಗೆ ಸನ್ಮಾನಿಸುವ ಮೂಲಕ ರಕ್ತದಾನದ ಹಬ್ಬವನ್ನು ಆಚರಿಸುತ್ತಿದ್ದೇವೆ
ಈ ರಕ್ತದಾನ ಹಬ್ಬಕ್ಕೆ ಮೈಸೂರಿನ ನಾಗರಿಕರು ಹಾಗೂ ರಕ್ತದಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಸಾಮಾಜಿಕ ಹೋರಾಟಗಾರ ವಿಕಾಶ್ ಶಾಸ್ತ್ರಿ, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು
ದೇವೇಂದ್ರ ಪರಿಹಾರಿಯ, ಆನಂದ್,ನವೀನ್, ರಾಮಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
