ಮೈಸೂರು: ವಯೋನಿವೃತ್ತಿ ಹೊಂದಿದ
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಣಿಶಾಸ್ತ್ರ ವಿಭಾಗದ ಪ್ರೊ.
ಸುಧಾ ಎಂ.ಸಿ ಅವರಿಗೆ ಕಾಲೇಜಿನಲ್ಲಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಚಿಕ್ಕಮಗಳೂರು ಜಿಲ್ಲೆ, ಬಾಳೆಹೊನ್ನೂರು ಮೂಲದ ಸುಧಾ ಅವರು ಹಾಸನದ ಸರ್ಕಾರಿ ಮಹಿಳಾ ವಿಜ್ಞಾನ ಕಾಲೇಜು ಮತ್ತು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಸೇರಿದಂತೆ ಸರಿಸುಮಾರು 34 ವರ್ಷಗಳ ಕಾಲ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ವೇಳೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಡಾ. ಪ್ರತಿಮಾ ಡಿ.ಎಸ್. ಅವರು ಸುಧಾ ಎಂ.ಸಿ. ಅವರ ವೃತ್ತಿಜೀವನದ ದಿನಗಳನ್ನು ಮೆಲುಕು ಹಾಕಿದರು. ನಿವೃತ್ತಿ ನಂತರದ ಜೀವನವು ಶುಭವಾಗಿರಲಿ ಎಂದು ಹಾರೈಸಿದರು.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಅವರು ಸುಧಾ ಎಂ.ಸಿ. ಅವರ ಆಧ್ಯಾಪನ ವೃತ್ತಿಯ ಶಿಸ್ತನ್ನು ಕೊಂಡಾಡಿದರು.
ಇದೇ ವೇಳೆ ಬೇರೆ ವಿಭಾಗದ ಅಧ್ಯಾಪಕರುಕೂಡಾ ಸನ್ಮಾನಿಸಿದರು.
ಪ್ರೊ.ತೋಯಜಾಕ್ಷ, ಪ್ರೊ. ಶೀಪಾದ್ಎಚ್. ಆರ್, ಪ್ರೊ.ರವಿಶಂಕರ ಡಿ.ಕೆ, ಪ್ರೊ.ಕುಮಾರ ಎಂ.ಎಸ್, ಪ್ರೊ.ಲೀಲಾವತಿ ಎನ್. ಕೆ , ಡಾ. ಹನುಮಂತಪ್ಪ ಎಚ್ ಮಕರಿ, ಡಾ. ನಟರಾಜ್ ಕೆ, ಪ್ರೊ.ಮಲ್ಲಿಕಾರ್ಜುನ ಐ ಮುಂತಾದವರು ಮಾತನಾಡಿದರು.
ಬೃಂದ ಎನ್ ಅವರು ಸುಧಾ ಎಂ.ಸಿ ಅವರ ಪರಿಚಯ ಮಾಡಿಕೊಟ್ಟರು.
ಬೀಳ್ಕೊಡುಗೆ ನೀಡಿದ ಸಹೋದ್ಯೋಗಿಗಳಿಗೆ ಹಾಗು ವೃತ್ತಿ ಜೀವನದಲ್ಲಿ ಸಹಕರಿಸಿದ ಸಹೋದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳು ಕುಟುಂಬ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಸುಧಾ ಅವರು ಧನ್ಯವಾದ ಅರ್ಪಿಸಿದರು.
ಕಾಲೇಜು ಅಧ್ಯಾಪಕ ಸಂಘದ ಕಾರ್ಯದರ್ಶಿ ಡಾ.ಕೆ.ಎಲ್. ರಮೇಶ ಸ್ವಾಗತಿಸಿ, ವಂದಿಸಿದರು.
ಸಮಾರಂಭದಲ್ಲಿ ಸಹಾಯಕ ನಿರ್ದೇಶಕ ಎ.ಬಿ.ನಾಗೇಂದ್ರ ಪ್ರಸಾದ್, ಅಧ್ಯಾಪಕ ಸಂಘದ ಖಜಾಂಚಿ ಡಾ. ನಮ್ರತಾ, ಸುಧಾ ಎಂಸಿ ಅವರ ಪತಿ ಪ್ರೊ. ವೀರೇಶ್, ಪತ್ರಾಂಕಿತ ವ್ಯವಸ್ಥಾಪಕಿ ಆರ್. ಮೀನಾಕ್ಷಿ ಹಾಗೂ ಆಧ್ಯಾಪಕೇತರರು, ಅಧ್ಯಾಪಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು.
