ಮೈಸೂರು: ಎಂ ಪಿ ಕೆ ಟ್ರಸ್ಟ್ ವತಿಯಿಂದ
ಮೈಸೂರಿನ ಹಳೆ ಡಿಸಿ ಕಚೇರಿ ಮುಂಭಾಗ ಪಕ್ಷಿ ಪ್ರಾಣಿಗಳಿಗೆ ನೀರಿನ ತೊಟ್ಟಿ ಅಳವಡಿಸುವ ಮೂಲಕ ಮಹಾವೀರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೆಳೆ ಮಾತನಾಡಿದ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್,
ಜೈನ ಧರ್ಮದ ಕೊನೆಯ ತೀರ್ಥಂಕರರಾದ ಭಗವಾನ್ ಮಹಾವೀರರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿದರು ಎಂದು ಹೇಳಿದರು.
ಮನುಷ್ಯ ಹುಟ್ಟಿನಿಂದಲೇ ಶ್ರೇಷ್ಠನಾಗುವುದಿಲ್ಲ, ಸತ್ಯದ ಹಾದಿಯಲ್ಲಿ, ದಾರ್ಶನಿಕರ ತತ್ವ,ಸಿದ್ಧಾಂತಗಳನ್ನು ನಂಬಿ ನಡೆದಾಗ ಮನುಷ್ಯನ ಜೀವನ ಶ್ರೇಷ್ಠವಾಗುವುದು ಎಂದು ಅವರು ಅಭಿಪ್ರಾಯಪಟ್ಟರು.
ಬಿಸಿಲಿನ ಬೇಗೆಯಿಂದ ಎಲ್ಲ ಜೀವಿಗಳು ತತ್ತರಿಸುತ್ತಿವೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳು ನೀರು, ಆಹಾರಕ್ಕಾಗಿ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣಿ, ಪಕ್ಷಿಗಳ ಸಂಕಷ್ಟ ಅರಿತು ಮಹಾವೀರ ಜಯಂತಿ ಅಂಗವಾಗಿ ನೀರಿನ ತೊಟ್ಟಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಮನುಷ್ಯನ ಜೀವ ಎಷ್ಟು ಮುಖ್ಯವೋ ಪ್ರಾಣಿ, ಪಕ್ಷಿಗಳ ಜೀವ ಕೂಡ ಅಷ್ಟೇ ಮುಖ್ಯ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಜಲಮೂಲಗಳು ಬತ್ತುತ್ತಿವೆ. ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ನೀರಿಗಾಗಿ ಮೈಲುಗಟ್ಟಲೆ ಅಲೆಯಬೇಕಾಗಿದೆ. ಇದು ಸಣ್ಣ ಪಕ್ಷಿ, ಪ್ರಾಣಿಗಳ ಬದುಕಿಗೆ ಮಾರಕವಾಗಿದೆ. ನೀರು ಮತ್ತು ಆಹಾರ ಇಲ್ಲದೆ ಪಕ್ಷಿಗಳು ಜೀವ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ ಎಂದು ವಿಕ್ರಂ ಅಯ್ಯಂಗಾರ್ ಆತಂಕ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳಾದ ಜಿ ರಾಘವೇಂದ್ರ,ಸಂದೇಶ್ ಪವರ್,ಎಸ್ ಎನ್ ರಾಜೇಶ್ ,ರವಿಚಂದ್ರ,ಸಚಿನ್ ನಾಯಕ್ ,ಅಮಿತ್,ರಾಕೇಶ್, ಕೃಷ್ಣಮೂರ್ತಿ
ನಿಂಗಮ್ಮ ಮತ್ತಿತರರು ಹಾಜರಿದ್ದರು.
