ಕುವೈತ್: ಕುವೈತ್ನ ವಿದ್ಯುತ್ ಉತ್ಪಾದನಾ ಸ್ಥಾವರ ಮತ್ತು ನೀರು ನೈರ್ಮಲೀಕರಣ ಘಟಕದ ಸೇವಾ ಕಟ್ಟಡದ ಮೇಲೆ ಇರಾನ್ ದಾಳಿ ನಡೆಸಿದೆ.
ಈ ದಾಳಿ ವೇಳೆ ಭಾರತೀಯ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ಕುವೈತ್ನ ವಿದ್ಯುತ್ ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ.
ಈ ದಾಳಿಯು ಕುವೈತ್ ರಾಜ್ಯದ ವಿರುದ್ಧದ ‘ಇರಾನಿನ ಆಕ್ರಮಣ’ದ ಭಾಗವಾಗಿದೆ ಎಂದು ಹೇಳಿದೆ. ಈ ದಾಳಿಯಿಂದ ಬಹಳಷ್ಟು ಹಾನಿ ಉಂಟಾಗಿದೆ,ಆದರೆ ದಾಳಿ ವೇಳೆ ಮೃತನ ಗುರುತು ಇನ್ನೂ ಬಹಿರಂಗವಾಗಿಲ್ಲ.
ಘಟನೆಯ ಬಗ್ಗೆ ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ವಿದೇಶಾಂಗ ಸಚಿವಾಲಯ ಈ ಕುರಿತು ಹೇಳಿಕೆ ನೀಡಿಲ್ಲ.
ಘಟನೆಯ ನಂತರ ತುರ್ತು ತಂಡಗಳು ಮತ್ತು ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ತಕ್ಷಣವೇ ಧಾವಿಸಿ, ಪರಿಸ್ಥಿತಿಯನ್ನು ನಿರ್ವಹಿಸಲಾಗಿದೆ ಮತ್ತು ವಿದ್ಯುತ್, ನೀರು ಸೇವೆಗಳು ಅಡೆತಡೆಯಿಲ್ಲದೆ ಮುಂದುವರಿದಿದೆ
