ಮೈಸೂರು: ಮೈಸೂರಿನ ಪೊಲೀಸ್ ಅಕಾಡೆಮಿ ಕವಾಯತು ಮೈದಾನದಲ್ಲಿ ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು
ಮುಖ್ಯ ಮಂತ್ರಿಗಳ ಟ್ರೋಪಿ ಸೇರಿದಂತೆ ವಿವಿಧ ಬಹುಮಾನಗಳನ್ನು ವಿತರಿಸಿದರು.
ಸರ್ವೋತ್ತಮ ಪ್ರಶಿಕ್ಷಣಾರ್ಥಿ ಮತ್ತು ಅತ್ಯುತ್ತಮ ಒಳಾಂಗಣ ಪ್ರಶಿಕ್ಷಣಾರ್ಥಿ ಬಹುಮಾನ, ಮುಖ್ಯ ಮಂತ್ರಿಗಳ ಟ್ರೋಪಿ ಮುಖ್ಯ ಮಂತ್ರಿಗಳ ಸ್ಪೋರ್ಡ್ ಡಿಜಿ ಮತ್ಯ ಐಜಿಪಿ ಅವರ ಬೇಟನ್ ಬಹುಮಾನ, ಶ್ರೀ ಬಿಂ.ನಾ ಗರುಡಾಚಾರ್ 10,000 ನಗದು ಬಹುಮಾನವನ್ನು ಅನಿಲ್ ಕುಮಾರ್ ತಿಪ್ಪಣ್ಣ ಪಡೆದುಕೊಂಡಿದ್ದಾರೆ.
ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿ ಬಹುಮಾನ, ಗೃಹ ಮಂತ್ರಿಗಳ ಟ್ರೋಫಿ,ಶ್ರೀ ಬಿಂ.ನಾ ಗರುಡಾಚಾರ್, ಪತ್ನಿ ಶ್ರೀಮತಿ ವತ್ಸಲಾ ಗರುಡಾಚಾರ್ 10,000 ನಗದು ಬಹುಮಾನವನ್ನು ಶಾಂಭವಿ ಜಿ ಅವರು ಪಡೆದುಕೊಂಡರು.
ಅತ್ಯುತ್ತಮ ಹೊರಾಂಗಣ ಪ್ರಶಿಕ್ಷಣಾರ್ಥಿ ಬಹುಮಾನ, ಡಿಜಿ & ಐಜಿಪಿ ಅವರ ಕಪ್ ಅನ್ನು ಸುನಿಲ್ ಎಂ ಅವರು ಪಡೆದರೆ,
ಉತ್ತಮ ರೈಫಲ್ ಫೈರಿಂಗ್ ಬಹುಮಾನವನ್ನು ದಶರಥ ಸಿ.ಕೆ ಅವರು ಪಡೆದುಕೊಂಡರು
ಉತ್ತಮ ಪಿಸ್ತೂಲ್ ಫೈರಿಂಗ್ ಬಹುಮಾನವನ್ನು ಶ್ರೀಧರ್ ಎಲ್ ಕೆ ಅವರು ಪಡೆದುಕೊಂಡಿದ್ದಾರೆ.
