ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಾಮಕೃಷ್ಣನಗರದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಮಹಿಳೆಯರ ಆರೋಗ್ಯ, ಆಹಾರ, ಹಕ್ಕುಗಳ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು.
ಅತ್ಲೇಟಿಕ್ಸ್ ನಲ್ಲಿ 18 ಬಾರಿ ಭಾರತವನ್ನು ಪ್ರತಿನಿಧಿಸಿ 14 ಬಾರಿ ಪ್ರಶಸ್ತಿ ಪಡೆದಿರುವ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಅಂತಾರಾಷ್ಟ್ರೀಯ ಕ್ರೀಡಾಪಟು ವಿಜಯ ರಮೇಶ್, ಮೈಸೂರಿನಲ್ಲಿ ಪ್ರಥಮವಾಗಿ ಸ್ವಸಹಾಯ ಗುಂಪನ್ನು ಪ್ರಾರಂಭಿಸಿ ಅನೇಕ ಮಹಿಳೆಯರಿಗೆ ಉದ್ಯೋಗ-ವ್ಯಾಪಾರ ಕಲ್ಪಿಸಲು ಶ್ರಮಿಸುತ್ತಿರುವ ಸೌಭಾಗ್ಯ, ವಕೀಲರಾದ ಪುಷ್ಪರವರನ್ನು ಸನ್ಮಾನಿಸಲಾಯಿತು.
ಈ ವರ್ಷದ ಮಹಿಳಾ ದಿನಾಚರಣೆಗೆ ಬಿಜೆಪಿ ದೇಶದಾದ್ಯಾಂತ ಸಿರಿಧಾನ್ಯ ಬಳಕೆಯ ಬಗ್ಗೆ ಮಹಿಳೆಯರಲ್ಲಿ ಜಾಗೃತಿ, ಹಕ್ಕುಗಳ ಬಗ್ಗೆ ಪೊಲೀಸ್ ಹಾಗೂ ಕಾನೂನು ತಜ್ಞರಿಂದ ಉಪನ್ಯಾಸ ನಡೆಸುತ್ತಿದ್ದು, ಅದರಂತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೂ ಕಾರ್ಯಕ್ರಮ ನಡೆಯಿತು.
ಚಾಮುಂಡೇಶ್ವರಿ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷರಾದ ಲಕ್ಷ್ಮಿ. ಜಿ, ಕ್ಷೇತ್ರದ ಅಧ್ಯಕ್ಷರಾದ ರಾಕೇಶ್ ಭಟ್, ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿ ಕಿರಣ್, ಹೇಮಾ ಗಂಗಪ್ಪ, ಮೋರ್ಚಾದ ನಗರ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಈರೇಗೌಡ, ಆರ್. ಸೋಮಶೇಖರ್, ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪುಟ್ಟಮ್ಮಣ್ಣಿ, ಮಂಜುಳಾ, ಪದಾಧಿಕಾರಿಗಳಾದ ಎನ್. ಶುಭಶ್ರೀ, ವಸುಮತಿ, ಪ್ರೇಮ ಹೊಳ್ಳ, ಶೃತಿ ನಾಗರಾಜ್, ಸುಜಾತ, ಶರ್ಮಿಷ್ಠ, ಮುಖಂಡರಾದ ಶಿವು ಪಟೇಲ್, ರಾಘವೇಂದ್ರ, ಸಿದ್ದೇಶ್ ಸೇರಿದಂತೆ ಸ್ಥಳೀಯ ಮಹಿಳಾ ಮುಖಂಡರು ಭಾಗವಹಿಸಿದ್ದರು.
