ಮೈಸೂರು: ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಜೆ ಎಸ್ ಜಗದೀಶ್ ಅವರ ನೇತೃತ್ವದಲ್ಲಿ ಸಂಸದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರ ಹುಟ್ಟು ಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.
ನಗರದ ಶಾರದಾದೇವಿ ನಗರ ವೃತ್ತದ ಉದ್ಯಾನವನದಲ್ಲಿ ಗಿಡಗಳನ್ನು ನೆಟ್ಟು,ನೀರು ಹಾಕಿ ನಂತರ ಸಾರ್ವಜನಿಕಕರಿಗೆ
ಸಿಹಿ ವಿತರಿಸುವ ಮೂಲಕ ಯದುವೀರ್
ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಸಿ ಎಫ್ ಟಿ ಆರ್ ಐ ಬಡಾವಣೆ ಅಧ್ಯಕ್ಷರಾದ ಕರುಣಾ,ನಿವೇದಿತಾ ನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಪ್ರಸಾದ್,ಬಿಜೆಪಿ ಮುಖಂಡರಾದ ಅಮೃತ ಆಶಾ,ಬಸವರಾಜು, ಮಹಾದೇವ, ದ್ವಾರಕಾ ನಾಥ್,ಶ್ರೀನಿವಾಸ್ ಮೋಹನ್ ಕುಮಾರ್, ಪ್ರಸನ್ನ ಕುಮಾರ್, ಲೋಹಿತ್ ಶರ್ಮಾ,ರಘು ಮತ್ತು ನಿಶ್ಚಿತ್ ಮತ್ತಿತರರು ಪಾಲ್ಗೊಂಡಿದ್ದರು.
