ಮೈಸೂರು: ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮನೋರಂಜನೆ ವಾರದ ಅಂಗವಾಗಿ ಕಪ್ಪು ಮತ್ತು ಬಿಳಿ ಬಣ್ಣದ ಉಡುಪು ಧರಿಸಿ ಹೆಣ್ಣುಮಕ್ಕಳು ಸಂಭ್ರಮಿಸಿದರು.
ಮೈಸೂರಿನ ಸಾಂಸ್ಕೃತಿಕ ಮಹತ್ವ ಸಾರುವ ಅಂಗವಾಗಿ ಮಹಾರಾಣಿ ಕಾಲೇಜಿನಲ್ಲಿ ಒಂದು ವಾರದ ಕಾಲ ವಿವಿಧ ಮನೋರಂಜನೆ ವಾರ ಆಚರಿಸಲಾಗುತ್ತಿದೆ.
ಇದರ ಅಂಗವಾಗಿ ಒಂದು ವಾರ ಕಾಲ ವಿದ್ಯಾರ್ಥಿಗಳು ವಿವಿಧ ಪ್ರೀತಿಯ ಬಟ್ಟೆ ಧರಿಸಿ ಸಂತೋಷ ಪಡಲಿದ್ದಾರೆ.
23ನೇ ಮಾರ್ಚ್ ಸೋಮವಾರ-ಫಿಲ್ಮಿರೆಟ್ರೋ ದಿನ, ಹಳೆಯ ಸಿನೆಮಾ ಅಥವಾ ಹಳೆಯ ಕಾಲದ ಶೈಲಿಯಲ್ಲಿ ಉಡುಪು ಧರಿಸುವುದು.
24ನೇ ಮಾರ್ಚ್ ಮಂಗಳವಾರ- ಕಪ್ಪು ಮತ್ತು ಬಿಳಿ ದಿನ, ಕಪ್ಪು ಮತ್ತು ಬಿಳಿ ಬಣ್ಣದ ಉಡುಪು ಧರಿಸುವುದು.ಅದರಂತೆ ಈ ಎರಡೂ ದಿನಗಳನ್ನು ವಿದ್ಯಾರ್ಥಿನಿಯರು ಆಚರಿಸಿ ಖುಷಿ ಪಟ್ಟರು.
25 ಬುಧವಾರ- ಟ್ವಿನ್ನಿಂಗ್ ದಿನ
ಒಬ್ಬ ಮಹಿಳಾ ಸ್ನೇಹಿತೆಯ ಜೊತೆ ಒಂದೇ ರೀತಿಯ ಉಡುಪು ಧರಿಸುವುದು.
26 ಗುರುವಾರ- ಮಿಸ್ಮ್ಯಾಚ್ ದಿನ
ಹೊಂದಿಕೆಯಾಗದ ಬಣ್ಣಗಳು ಅಥವಾ ಬೇರೆಬೇರೆ ಶೈಲಿಯ ಉಡುಪು ಧರಿಸುವುದು.
27 ಶುಕ್ರವಾರ-ಪಿಂಕ್ ದಿನ
ಗುಲಾಬಿ ಬಣ್ಣದ ಉಡುಪು ಧರಿಸುವುದು.
28 ಶನಿವಾರ- ಪಾರಂಪರಿಕ ದಿನ
ಪಾರಂಪರಿಕ,ಸಾಂಪ್ರದಾಯಿಕ ಉಡುಪು ಧರಿಸುವುದು.
ಕಾಲೇಜಿನ ಸಾಂಸ್ಕೃತಿಕ ಸಮಿತಿ ವತಿಯಿಂದ ಈ ಆಚರಣೆಯನ್ನು ಮಾಡಲಾಗುತ್ತಿದ್ದು,
ಪ್ರತಿದಿನ ತರಹೇವಾರಿ ದಿರಿಸನ್ನು ತೊಟ್ಟು ವಿದ್ಯಾರ್ಥಿನಿಯರು ಸಂಭ್ರಮಿಸಲಿದ್ದಾರೆ.
