ಯಾದಗಿರಿ: ಊರಿಗೆ ತೆರಳಲು ವಾಹನಗಳು ಇಲ್ಲದ ಕಾರಣ ಗುಂಡಿನ ಮತ್ತಲ್ಲಿ ಚಾಲಾಕಿ ಚಾಲಕನೊಬ್ಬ ಬಸ್ ಹೈಜಾಕ್ ಮಾಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಇಲಾಖೆಯಿಂದ ವಜಾಗೊಂಡಿದ್ದ ಚಾಲಕನಿಂದ ಈ ಬಸ್ ಕಳವು ನಡೆದಿದೆ.
ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಬಸ್ ಕಳ್ಳತನ ಮಾಡಿ ತೆಗೆದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಸೈದಾಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ನಿಲುಗಡೆ ಮಾಡಲಾಗಿತ್ತು.ಮಧ್ಯರಾತ್ರಿ ಬಸ್
ಕೆ ಕೆ ಆರ್ ಟಿ ಸಿ ಚಾಲಕ ಕಂ ನಿರ್ವಾಹಕನಾಗಿದ್ದ ಮಹಿಪಾಲರೆಡ್ಡಿ ಈ ಕೃತ್ಯ ಮಾಡಿದ ಭೂಪ.
ಕರ್ತವ್ಯ ಲೋಪ ಹಿನ್ನಲೆ ಈತನನ್ನು ಇತ್ತೀಚೆಗೆ ವಜಾ ಮಾಡಲಾಗಿತ್ತು,ಸ್ವಗ್ರಾಮ ರಾಚನಳ್ಳಿಗೆ ಹೋಗಲು ಯಾವುದೇ ವಾಹನಗಳು ಇಲ್ಲದ್ದಕ್ಕೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬಸ್ ಚಾಲನೆ ಮಾಡಿಕೊಂಡು ಹೋಗಿಯೇ ಬಿಟ್ಟ.
ನಂತರ ಕದ್ದ ಬಸ್ ಏನು ಮಾಡುವುದೆಂದು ತೋಚದೆ ಊರಿನ ದೇವಸ್ಥಾನ ಮುಂಭಾಗದಲ್ಲಿ ನಿಲ್ಲಿಸಿದ.
ಗುಂಡಿನ ಮತ್ತಿನಲ್ಲಿ ಮಹಿಪಾಲರೆಡ್ಡಿ ಬಸ್ ಕದ್ದೊಯ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಸೈದಾಪುರ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಕೇಸ್ ದಾಖಲಾಗಿದೆ.ವಿಷಯ ತಿಳಿದ ನಂತರ ಕಳುವಾಗಿದ್ದ ಬಸ್ ಅನ್ನು ಪೊಲೀಸರು ಮರಳಿ ತಂದಿದ್ದಾರೆ.
