ರಾಯಚೂರು: ಕರ್ನಾಟಕ ಸರ್ಕಾರದ ಸಣ್ಣ ನಿರಾವರಿ ಸಚಿವರಾದ ಬೋಸರಾಜ್ ಅವರು ರಾಯಚೂರು ಪಂಡಿತ್ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಪ್ರತಿಭಾ ಸುಗಮ ಸಂಗೀತ ಸಂಸ್ಥೆ ಆಯೋಜಿಸಿದ್ದ ಜಾನಪದ ಸಂಭ್ರಮ ಉದ್ಘಾಟನೆ ಮಾಡಿದರು.
ಈ ಸಮಾರಂಭದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷರಾದ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಬೋಸರಾಜ್ ಅವರು ಅಭಿನಂದಿಸಿ ಗೌರವಿಸಿದರು.
ಜಾನಪದ ಎಸ್ ಬಾಲಾಜಿ ಅವರು ಜಾನಪದ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು ಹಾಗೂ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು.
ಹಿರಿಯ ನಿವೃತ್ತ ಐ ಎ ಎಸ್ ಅಧಿಕಾರಿ ಡಾ ಸಿ ಸೋಮಶೇಖರ್, ಡಾ ಶರಣಪ್ಪ ಗೋನಾಳ್, ರಾಜ್ಯ ಮಾಹಿತಿ ಆಯುಕ್ತರಾದ ಬಿ ವೆಂಕಟ್ ಸಿಂಗ್, ಕೆ ಸಿ ಕಾಂತಪ್ಪ ಮತ್ತಿತರರು
ಉಪಸ್ಥಿತರಿದ್ದರು.
