ಕೆ.ಆರ್.ನಗರ: ಪುಣ್ಯಕ್ಷೇತ್ರ ಶ್ರೀ ಕಪ್ಪಡಿಯ ಸಿದ್ದಪ್ಪಾಜಿ ಗದ್ದುಗೆಯಲ್ಲಿ ಜಾತ್ರೆ ಕಳೆಗಟ್ಟಿದೆ ರಾಜ್ಯಾದ್ಯಂತ ಸಾವಿರಾರು ಭಕ್ತರು ಆಗಮಿಸಿದ್ದಾರೆ.
ಕಪ್ಪಡಿಯಲ್ಲಿ ಮಂಟೇಸ್ವಾಮಿ,
ಸಿದ್ದಪ್ಪಾಜಿ, ರಾಜಪ್ಪಾಜಿ, ದೊಡ್ಡಮ್ಮತಾಯಿ, ಚನ್ನಮ್ಮ ತಾಯಿಗೆ ಪ್ರತೀ ವರ್ಷ ಪೂಜೆ ಸಲ್ಲಿಸಿ ಮಹಾಶಿವರಾತ್ರಿ ಹಬ್ಬದ ದಿಂದ ಒಂದು ತಿಂಗಳ ಕಾಲ ಅದ್ದೂರಿ ಜಾತ್ರಾ ಮಹೋತ್ಸವ ನಡೆಯುತ್ತದೆ.
ಈ ವರ್ಷ ಸಿದ್ದಪ್ಪಾಜಿ ಗದ್ದುಗೆಯ ಮಳವಳ್ಳಿ ಶಾಖ ಮಠದ ಶ್ರೀ ವರ್ಚಸ್ವಿ ಸಿದ್ದಲಿಂಗರಾಜೆ ಅರಸು ಅವರ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಗಳು ಹಾಗೂ ಜಾತ್ರಾ ಮಹೋತ್ಸವ ನಡೆಯುತ್ತಿದೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೇವಾಲಯದ ಬಸವಣ್ಣ ಆಗಮಿಸಿದ ನಂತರ ಶ್ರೀ ವರ್ಚಸ್ವಿ ಸಿದ್ದಲಿಂಗರಾಜೆ ಅರಸು ಅವರು ಬಂದು ಉರಿ ಗದ್ದಿಗೆ ಮೇಲೆ ಕುಳಿತು ಭಕ್ತರಿಗೆ ಆಶೀರ್ವಚನ ನೀಡುವುದು ವಿಶೇಷ.
ಮುಂದಿನ ವರ್ಷ ಈ ಎಲ್ಲಾ ಕಾರ್ಯಗಳು ವರುಣ್ ಸಿದಾನಂದರಾಜೇ ಅರಸು ಅವರ ನೇತೃತ್ವದಲ್ಲಿ ನಡೆಯುತ್ತದೆ.
ಯಾವುದೇ ಜಾತಿ ಭೇದವಿಲ್ಲದೆ ಕಪ್ಪಡಿಯಲ್ಲಿ ಎಲ್ಲಾ ಸಮುದಾಯದವರು ಸೇರಿ ದೇವರಿಗೆ ಪೂಜೆ ಸಲ್ಲಿಸುವುದು ವಿಶೇಷ. ಪ್ರತಿದಿನ ಅನ್ನದಾಸೋಹ, ಪ್ರಸಾದ ವಿತರಣೆ ನಿರಂತರವಾಗಿ ನಡೆಯುತ್ತಿರುತ್ತದೆ.
