ಪಾಕಿಸ್ತಾನ,ಮಾ.1 : ಖಮೇನಿ ಹತ್ಯೆ ಖಂಡಿಸಿ, ಪಾಕಿಸ್ತಾನದಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದೆ.ಪಾಕಿಸ್ತಾನದ ಕರಾಚಿಯಲ್ಲಿನ ರಾಯಭಾರಿ ಕಚೇರಿ ಮೇಲೆ ಉದ್ರಿಕ್ತರು ದಾಳಿ ನಡೆಸಿದ್ದಾರೆ.
ಇದರಿಂದಾಗಿ 10 ಮಂದಿ ಮೃತಪಟ್ಟಿದ್ದಾರೆ, 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗೊಂಡಿದ್ದಾರೆ.
ಪ್ರತಿಭಟನೆ ತೀವ್ರವಾದ ಬೆನ್ನಲ್ಲೇ ಪಾಕಿಸ್ತಾನದ ಹಲವೆಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಕರಾಚಿಯಲ್ಲಿ ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ನ ಕ್ರಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇರಾನ್ ನಾಯಕ ಖಮೇನಿ ಹತ್ಯೆಗೆ ಅಮೆರಿಕವೇ ಕಾರಣ ಎಂದು ಉದ್ರಿಕ್ತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರತಾ ಪಡೆಗಳು ಫೈರಿಂಗ್ ಮಾಡಿವೆ.
