ಮೈಸೂರು: ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಅದ್ವೈತ ಸಿದ್ದಾಂತ ಬೋಧಿಸಿದ ಮಹಾನ್ ಸಂತ, ಮಹಾನ್ ಚಿಂತಕ, ಶ್ರೀ ರಾಮಕೃಷ್ಣ ಪರಮಹಂಸರ 191ನೇ ಜಯಂತಿ ಆಚರಿಸಲಾಯಿತು.
ಶ್ರೀ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಪರಮಹಂಸರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ನಂತರ ಸಿಹಿ ವಿತರಿಸಲಾಯಿತು.
ಈ ವೇಳೆ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ ಮಾತನಾಡಿ,
ನಮ್ಮ ದೇಶದ ಪ್ರಸಿದ್ಧ ಸಂತರು, ಮಹಾತಾಯಿ ಕಾಳಿಯ ಆರಾಧಕರು, ಅದ್ವೈತ, ವೇದಾಂತ ಸಿದ್ಧಾಂತವನ್ನು ಬೋಧಿಸಿ, ಎಲ್ಲ ಧರ್ಮಗಳ ಗುರಿಗಳು ಒಂದೇ ಎಂದು ಸಾರಿದ ಶ್ರೀ ರಾಮಕೃಷ್ಣ ಪರಮಹಂಸರ ಜನ್ಮದಿನವಾದ ಇಂದು ಅವರಿಗೆ ಕೋಟಿ, ಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಮತ್ತು ಬೋಧನೆಗಳು ನಮ್ಮ ಭಾರತೀಯ ಸಂಸ್ಕೃತಿ ಹಾಗೂ ನಂಬಿಕೆಗಳ ಮೇಲೆ ಅಪಾರವಾದ ಪ್ರಭಾವ ಬೀರಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ ರಾಘವೇಂದ್ರ, ಅಖಿಲ ಕರ್ನಾಟಕ ಸಿದ್ದರಾಮಯ್ಯ ಬ್ರಿಗೇಡ್ ಅಧ್ಯಕ್ಷರಾದ ಹಿನಕಲ್ ಉದಯ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಆರಿಫ್ ಪಾಷಾ, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಚಂದ್ರು, ಎಸ್.ಎನ್ ರಾಜೇಶ್, ಹರೀಶ್ ಗೌಡ, ರಾಕೇಶ್, ಆನಂದ, ರವಿಚಂದ್ರ, ಲೋಕೇಶ್, ನಿತೀಶ್, ಡೈರಿ ವೆಂಕಟೇಶ್, ಮಂಜುನಾಥ್ ಮತ್ತಿತರರು ಹಾಜರಿದ್ದರು.
