ಮೆಕ್ಸಿಕೊ: ಮೆಕ್ಸಿಕೋದ ಗ್ವಾನಾಜುವಾಟೊದ
ಇರಾಪುವಾಟೊ ನಗರದಲ್ಲಿ ಬಂದೂಕುಧಾರಿ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಹನ್ನೆರಡು ಮಂದಿ ಬಲಿಯಾಗಿದ್ದಾರೆ,ಇಡೀ ನಗರದಲ್ಲಿ ಆತಂಕ ಮನೆ ಮಾಡಿದೆ.
ಗುಂಡು ಹಾರಾಟ ಪ್ರಾರಂಭವಾದಾಗ ಜನರು ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಆಚರಣೆಯಲ್ಲಿ ಬೀದಿಯಲ್ಲಿ ಕುಡಿಯುತ್ತಾ,ನೃತ್ಯ ಮಾಡುತ್ತಾ ಸಂಭ್ರಮದಲ್ಲಿದ್ದರು.
ಗುಂಡು ಹಾರಾಟ ಪ್ರಾರಂಭವಾದಾಗ ಜನ ಕಿರುಚುತ್ತಾ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಅಡ್ಡಾದಿಡ್ಡಿ ಓಡಿದ್ದಾರೆ.
ಸೆರ್ವಾಂಟೆಸ್ ಅವರು ಬಲಿಯಾದವರ ಸಂಖ್ಯೆ 12 ಕ್ಕೆ ಏರಿದ್ದು ಸುಮಾರು 20 ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ದಾಳಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು, ಗ್ವಾನಾಜುವಾಟೊದ ಸ್ಯಾನ್ ಬಾರ್ಟೊಲೊ ಡಿ ಬೆರಿಯೊಸ್ನಲ್ಲಿ ಕ್ಯಾಥೋಲಿಕ್ ಚರ್ಚ್ ಆಯೋಜಿಸಿದ್ದ ಪಾರ್ಟಿಯನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದನ್ನು ಸ್ಮರಿಸಬಹುದು.
