ಕಾಂತಾರಾ ಚಾಪ್ಟರ್ 1 ಚಿತ್ರದ ಮುಗುಳುನಗೆಯ ಸುಂದರಿ ನಾಯಕಿ ನಟಿ ರುಕ್ಮಿಣಿ ವಸಂತ್ ಮತ್ತೆ ಸದ್ದು ಮಾಡುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನೆಮಾದಲ್ಲೂ ಅವರು ನಟಿಸುತ್ತಿದ್ದಾರೆ.
ಇದೀಗ ಯಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ನಟಿ ರುಕ್ಷ್ಮಿಣಿ ವಸಂತ್ ಅವರ ಪೋಸ್ಟರ್ ಒಂದನ್ನು ಶೇರ್ ಮಾಡಿದ್ದು ಇದು ಸಕತ್ತಾಗಿದೆ.
ಟಾಕ್ಸಿಕ್ ಸಿನಿಮಾದಲ್ಲಿ ನಟಿ ರುಕ್ಕಿಣಿ ವಸಂತ್ ಮೆಲ್ಲಿಸಾ ಎಂಬ ಪಾತ್ರದಲ್ಲಿ ನಟಿಸಲಿದ್ದಾರೆ. ವಯಸ್ಕರಿಗೆ ಇದೊಂದು ವಿಷಕಾರಿ ಕಾಲ್ಪನಿಕ ಕಥೆಯಾಗಿದೆ ಎಂದು ನಟ ಯಶ್ ಬರೆದುಕೊಂಡಿದ್ದಾರೆ.
ಈ ಪೋಸ್ಟರ್ನಲ್ಲಿ ನಟಿ ರುಕ್ಕಿಣಿ ವಸಂತ್ ಅವರು ಅತ್ಯಂತ ಆಕರ್ಷಕವಾಗಿ ಕಾಣಿಸಿಕೊಂಡಿದ್ದು, ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗೀತು ಮೋಹನ್ದಾಸ್ ನಿರ್ದೇಶನದಲ್ಲಿ ಬರಲಿರುವ ಟಾಕ್ಸಿಕ್ ಸಿನಿಮಾದಲ್ಲಿ ಸ್ಟಾರ್ ನಟಿಯರ ದೊಡ್ಡ ಸಮೂಹವೇ ಇದೆ.
ಯಶ್ ಅವರು ಈಗಾಗಲೇ ನಟಿ ಕಿಯಾರಾ ಅಡ್ವಾನಿ, ನಟಿ ಹುಮಾ ಖುರೇಷಿ, ನಯನತಾರಾ, ತಾರಾ ಸುತಾರಿಯಾ ಅವರನ್ನು ಪರಿಚಯಿಸಿದ್ದಾರೆ.ಈಗ ಕನ್ನಡದ ಸುಂದರಿ ರುಕ್ಕಿಣಿ ವಸಂತ್ ಅವರನ್ನು ಹೊಸ ಲುಕ್ ನಲ್ಲಿ ಪರಿಚಯಿಸಲಾಗಿದೆ.
ಈ ಸಿನಿಮಾವು ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ.
ಹಾಲಿವುಡ್ನ ‘ಜಾನ್ ವಿಕ್’, ‘ಫಾಸ್ಟ್ ಆ್ಯಂಡ್ ಫ್ಲೋರಿಯಸ್’, ‘ವಾರಿಯರ್’ ಮುಂತಾದ ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜೆ.ಜೆ.ಪೆರಿ ‘ಟಾಕ್ಸಿಕ್’ನ ಸಾಹಸ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ.
