ಮೈಸೂರು: ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್ ತಿಳಿಸಿದರು.
ಮೈಸೂರಿನ ಅರವಿಂದ್ ನಗರದಲ್ಲಿರುವ ಜೆಎಸ್ಎಸ್ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಎಳ್ಳು ಬೆಲ್ಲ,ಹಣ್ಣು ಹಂಪಲು ವಿತರಿಸುವ ಸೇವಾ ಕಾರ್ಯದ ಮೂಲಕ ಹಿರಿಯರಿಗೆ ಹೊಸ ವರ್ಷದ ಶುಭ ಕೋರಿ ನಂತರ ಹಿರಿಯರ ಆಶೀರ್ವಾದ ಪಡೆದು ಪ್ರಕಾಶ್ ಮಾತನಾಡಿದರು.
ಜೆಎಸ್ಎಸ್ ಸಂಸ್ಥೆಯವರ ಈ ವೃದ್ಧಾಶ್ರಮ 25 ವರ್ಷಗಳಿಂದ ವೃದ್ಧ ದಂಪತಿಗಳಿಗೆ, ವಯಸ್ಸಾದ, ತಾಯಂದಿರಿಗೆ ಆಶ್ರಯ ನೀಡಿ ಅವರ ಊಟ ಉಪಚಾರಗಳನ್ನು ಉಚಿತವಾಗಿ ನೀಡುವುದರ ಜೊತೆಗೆ ಅವರ ಆರೋಗ್ಯ ತಪಾಸಣೆಯನ್ನು ಆಗಿಂದಾಗೆ ಮಾಡಿಸಿ ಅವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಈಗಿನ ಮಕ್ಕಳಿಗೆ ತಂದೆ ತಾಯಿ ಮಾಡಿರುವ ಆಸ್ತಿ ಬೇಕು.ಅವರ ಕಾಳಜಿ ಅವರ ಯೋಗಕ್ಷೇಮ ಬೇಕಾಗಿಲ್ಲ ಇದು ಅತ್ಯಂತ ಬೇಸರದ ಸಂಗತಿ ಎಂದು ಹೇಳಿದರು.
ವಿದ್ಯಾವಂತ, ಶ್ರೀಮಂತ ಮಕ್ಕಳೇ ವೃದ್ಧಾಶ್ರಮದಲ್ಲಿ ತಮ್ಮ ತಂದೆ ತಾಯಿಯನ್ನು ಬಿಟ್ಟು ಹೋಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ವಿಷಾದಿಸಿದ ಪ್ರಕಾಶ್, ತಂದೆ ತಾಯಿ ಜೀವಂತವಿದ್ದಾಗಲೇ ಅವರ ಆರೈಕೆ ಅವರ ಪೋಷಣೆ ಮಾಡುವುದು ಮಕ್ಕಳ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಸಿಂಚನಗೌಡ, ವಿದ್ಯಾ, ಛಾಯ,ಗಾಯಕ ಯಶವಂತ್ ಕುಮಾರ್ , ಹಿರಿಯ ಕ್ರೀಡಾಪಟು ಮಹದೇವ್,ರಾಜೇಶ್ ಕುಮಾರ್, ಮಹೇಶ್, ಕ್ರೀಡಾ ತರಬೇತಿದಾರ ಜಗದೀಶ್, ಎಸ್.ಪಿ. ಅಕ್ಷಯ್ ಪ್ರಿಯಾದರ್ಶನ್, ದತ್ತ ಮತ್ತಿತರರು ಹಾಜರಿದ್ದರು.
