ಯಾದಗಿರಿ: ಆಟೋ ಉರುಳಿಬಿದ್ದು ಪ್ರಯಾಣಿಕ ಮೃತಪಟ್ಟಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಯಾದಗಿರಿ ತಾಲೂಕಿನಲ್ಲಿ ನಡೆದಿದೆ.
ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

ರಾತ್ರಿಯಿಡೀ ಭಜನೆ ಮಾಡಿ ಇಂದು ಮುಂಜಾನೆ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಯಾದಗಿರಿಯಿಂದ ಹತ್ತಿಕುಣಿ ಕಡೆಗೆ ಆಟೋ
ಬರುತ್ತಿದ್ದಾಗ ಹಂದಿ ಅಡ್ಡ ಬಂದಿದೆ,ಅದನ್ನು ತಪ್ಪಿಸಲು ಹೋದಾಗ ಆಟೋ ಉರುಳಿ ಬಿದ್ದಿದೆ.
ಆಟೋದಲ್ಲಿದ್ಧ ಒಬ್ಬ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು,ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡರು.