(ವರದಿ: ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಪಟ್ಟಣದ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ
ಲಲಿತಾ ಸಹಸ್ರನಾಮ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಿದವು.
ಯುಗಾದಿ ಹಬ್ಬದ ಪ್ರಯುಕ್ತ ಮಾ. 28 ರಂದು ರಾತ್ರಿ ಚಂದ್ರಶೇಖರಸ್ವಾಮಿ ಸಮೇತ ಗಿರಿಜಾ ಕಲ್ಯಾಣ ಮಹೋತ್ಸವ, 30 ರಂದು ಬ್ರಹ್ಮ ರಥೋತ್ಸವ ಜರುಗಲಿದೆ.
ಹಾಗಾಗಿ ಮಾ.23 ರಿಂದ ದೇವಾಲಯದಲ್ಲಿ ವಿವಿಧ ವಿಶೇಷ ಪೂಜಾ ಪುನಸ್ಕಾರಗಳು ಪ್ರಾರಂಭವಾಗಿದ್ದು, ಏ.2 ವರೆಗೆ ನಡೆಯಲಿದೆ.
ಮಾ.23 ರಂದು ರಾತ್ರಿ ಮೃತ್ಸಂಗ್ರಹಣ,ಅಂಕುರಾರ್ಪಣೆ, ಧ್ವಜ ಸಮರ್ಪಣೆಯೊಡನೆ ವಿವಿಧ ವಿಶೇಷ ಪೂಜಾ ಪುನಸ್ಕಾರಗಳು ಪ್ರಾರಂಭವಾಗಿದ್ದು ನಿನ್ನೆ ರಾತ್ರಿ ಲಲಿತಾ ಸಹಸ್ರನಾಮ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಿದವು.

28 ರಂದು ರಾತ್ರಿ ಚಂದ್ರಶೇಖರಸ್ವಾಮಿ ಸಮೇತ ಗಿರಿಜಾ ಕಲ್ಯಾಣ ಮಹೋತ್ಸವ ವೃಷಭವಾಹನೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ ಶಿವಯಾಗ ಪೂಜೆ, ಮಧ್ಯಾಹ್ನ
ಬಲಿ ಪ್ರಧಾನ, ಸಂಜೆ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಕಾಶಿಯಾತ್ರಾ ಉತ್ಸವ, 30 ರಂದು ನಡೆಯಲಿರುವ ಯುಗಾದಿ ಹಬ್ಬದಂದು ಬೆಳಿಗ್ಗೆ 10 – 35 ರಿಂದ 10 – 59 ಗಂಟೆಯೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಬ್ರಹ್ಮ ರಥೋತ್ಸವ ಜರುಗಲಿದೆ.
ಏ.2 ರಂದು ಪೂರ್ಣಾಹುತಿ, ಮಹಾಭಿಷೇಕ ,12 ಸುತ್ತು ಮೆರವಣಿಗೆಯೊಡನೆ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ವಿವಿಧ ಉತ್ಸವಾದಿಗಳು ಸಂಪನ್ನಗೊಳ್ಳಲಿದೆ.
ಈ ಎಲ್ಲಾ ಕಾರ್ಯಕ್ರಮಗಳು ಲೋಕಕಲ್ಯಾಣಕ್ಕಾಗಿ ನಡೆಯುತ್ತಿದ್ದು ಬೆಂಗಳೂರಿನ ಶಂಕರ ಧಾರ್ಮಿಕ ಸಭಾ ಸೇವಾ ಟ್ರಸ್ಟ್ ನ ಶೈವಾಗಮಿಕ ದೀಕ್ಷಿತರಾದ ಡಾ.ಕೆ.ವಿ. ಭರತ್ ಕಲ್ಲೂರು ಅವರ ನೇತೃತ್ವದಲ್ಲಿ ಆಂಧ್ರ ದೇವಾಂಗ ಮಹಾಸಭಾ, ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ನಡುಕಲ ಬೀದಿ ಕುಲಬಾಂದವರು ನಡೆಸಿ ಕೊಡುತ್ತಿದ್ದಾರೆ.
ಹಿಂದೂಗಳ ಹೊಸ ವರ್ಷ ಯುಗಾದಿ, ಪ್ರತಿವರ್ಷ ಯುಗಾದಿ ಹಬ್ಬದಂದು ಇಲ್ಲಿ ಬ್ರಹ್ಮ ರಥೋತ್ಸವ ಜರುಗುವುದು ವಿಶೇಷ.

ಆದಿಯಲ್ಲಿ ಬ್ರಹ್ಮಾದಿಗಳಿಂದಲೂ, ಕಲಿಯುಗದಲ್ಲಿ ಕೌಹಳ ಗಾಲವ ಋಷಿಪುಂಗವರಿಂದಲೂ ಆದ್ಯಾಪಿ ಭಕ್ತ ಮಹಾಶಯರುಗಳಿಂದಲೂ ಸೇವೆ ಸಲ್ಲಿಸಲ್ಪಡುತ್ತಿರುವ ಶ್ರೀ ಚೂಡಾಂಭಿಕಾ ಸಮೇತ ಶ್ರೀ ರಾಮಲಿಂಗೇಶ್ವರ ಸ್ವಾಮಿ ಅವರ ಬ್ರಹ್ಮ ರಥೋತ್ಸವ ಕೊಳ್ಳೇಗಾಲದಲ್ಲಿ
ಜರುಗುವ ಬಗ್ಗೆ ಗದಗ ಪಂಚಾಂಗ, ಮೈಸೂರು ಪಂಚಾಂಗ, ಹುಬ್ಬಳ್ಳಿ-ಧಾರವಾಡ ಪಂಚಾಂಗ, ಒಂಟಿಕೊಪ್ಪಲ್ ಪಂಚಾಂಗ, ಬಸವ ಪಂಚಾಂಗ ಸೇರಿದಂತೆ ಎಲ್ಲಾ ಪಂಚಾಂಗಗಳಲ್ಲೂ ಉಲ್ಲೇಖ ವಾಗಿದೆ ಎಂದು ರಮೇಶ್ ಮುರಾರಿ ಮಾಹಿತಿ ನೀಡಿದರು.