ಸಿಎಂ ಸ್ಥಾನಕ್ಕೆ ಟವಲ್ ಹಾಕಿದ ಸಚಿವ ದರ್ಶನಾಪೂರ್

Spread the love

ಯಾದಗಿರಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಗ್ಲಿ,ಸಿಎಂ ಗಾದಿಯಾಗಲ್ಲಿ ಯಾರು ಬೇಡ ಅಂತಾರ್ರೀ ಎಲ್ಲರೂ ಬೇಕಂತಾರೆ ಆದ್ರಾ ಹೈ ಕಮಾಂಡ್ ಆ ಬಗ್ಗೆ ನಿರ್ಧಾರ ಮಾಡಿಲ್ಲವಲ್ಲಾ ಎಂದು ಸಚಿವ ಶರಣ ಬಸಪ್ಪ ದರ್ಶನಾಪೂರ ಮಾರ್ಮಿಕವಾಗಿ ನುಡಿದರು.

ಯಾದಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಒಬ್ಬರೇ ಅಲ್ಲ ಇನ್ನೂ ಹಲವರಿದ್ದಾರೆ,ಆದರೆ ಪಕ್ಷದ ಹೈ ಕಮಾಂಡ್ ಅಧ್ಯಕ್ಷರ ಬದಲಾವಣೆ ವಿಚಾರ ಪ್ರಸ್ತಾಪನೇ ಮಾಡಿಲ್ಲ ಎಂದು ಹೇಳಿದರು.

ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಮಾಡ್ತೀವಿ ಅಂತ ಎಲ್ಲೂ ಹೇಳಿಲ್ಲ,
ಹೈಕಮಾಂಡ್ ಅಧ್ಯಕ್ಷರ ಬದಲಾವಣೆ ಮಾಡ್ತೀವಿ ಅಂದಾಗ ತಾನೆ ಈ ಪ್ರಶ್ನೆಗಳೆಲ್ಲ ಉದ್ಭವಾಗೋದು ಎಂದರು

ಸದ್ಯಕ್ಕೆ ಅಧ್ಯಕ್ಷರ ಬದಲಾವಣೆ ಆಗುವ ಬಗ್ಗೆ ಮಾತೇ ಇಲ್ಲ ಸತೀಶ್ ಜಾರಕಿಹೊಳಿ ಅವರು ಕೂಡಾ ಡಿ.ಕೆ.ಶಿವಕುಮಾರ್ ಅವರನ್ನ ತೆಗದು ನನಗೆ ಅಧ್ಯಕ್ಷ ಮಾಡ್ರಿ ಅಂತ ಎಲ್ಲೂ ಹೇಳಿಲ್ಲ.
ಹೈಕಮಾಂಡ್ ಕೊಟ್ಟರೇ ನಾನು ಅಧ್ಯಕ್ಷ ಆಗ್ತಿನಿ, ಚೆನ್ನಾರೆಡ್ಡೀನೂ ಆಗ್ತಾರೆ ಎಂದು ನಗುತ್ತಾ ನುಡಿದರು.

ಮೊದಲು ಹೊಸ ಅಧ್ಯಕ್ಷ ನೇಮಕ ಮಾಡಬೇಕು ಅನ್ನೋದು ಹೈಕಮಾಂಡ್ ನಿರ್ಧಾರ ಮಾಡಬೇಕು,
ಅಧ್ಯಕ್ಷ ಆಗು ಅಂದರೆ ಯಾರೂ ಒಲ್ಲೆ ಅಂತಾರೆ ಹೇಳಿ,
ಆದ್ರೂ ನಮಗೆ ಆ ಗಾದಿ ಬೇಕಾಗಿಲ್ಲ
ಶಾಸಕರಾಗಿಯೇ ನಾವು ಆರಾಮಗಿದ್ದೀವಿ ಇಲ್ಲೇ ಆರಾಮ ಇರ್ತಿವಿ ಎಂದು ಹೇಳಿದರು.

ಅದೆಲ್ಲಾ ಯಾಕ್ ಬಿಡ್ರಿ ಒಮ್ಮೇಲೆ ಮುಖ್ಯಮಂತ್ರಿ ಗಾದಿಗೇ ನೋಡೋಣ ಎಂದು ಮುಗುಳ್ನಕ್ಕರು ದರ್ಶನಾಪೂರ.ಈ‌ ವೇಳೆ ಸ್ಥಳೀಯ ಮುಖಂಡರು ಹಾಜರಿದ್ದರು.

ನಾಳೆಗೆ ಸಿಎಂ ಸ್ಥಾನ ಕೊಟ್ಟರೂ ಆಗ್ತಿವಿ,
ಯಾಕೆ ನಾಳೆ ಸಿಎಂ ಆಗಬಾರದಾ 2028ಕ್ಕೆ ಆಗಬೇಕಾ,ರಾಹುಲ್ ಗಾಂಧಿಯವರು ಕರೆದರೆ ನಾನು ಸಿಎಂ ಆಗ್ತೀನಿ ಎಂದು ದರ್ಶನಾಪೂರ ತಮಾಷೆಗೆ ಆದರೂ ಸಿಎಂ ಯಾಕಾಗಬಾರದು ಎಂದು ತಮ್ಮದೊಂದು ಟವಲ್ ಹಾಕಿ ಬುಕ್ ಮಾಡಿದಾರೆ.

ಸರ್ಕಾರ ಮೊದ್ಲೇಇಕ್ಕಟ್ಟಿನಲ್ಲಿದೆ,
ಏನೇನಾಗುತ್ತೋ‌ ಕಾದು ನೋಡೋಣ.