ಮೈಸೂರು: ಮೈಸೂರಿನ ವಿದ್ಯಾರಣ್ಯ ಪುರಂ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ವೀಲಿಂಗ್ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.
ಹೀಗೆ ಯಾವ ಎಗ್ಗೂ ಇಲ್ಲದೆ ವ್ಹೀಲಿಂಗ್ ಮಾಡುವ ಯುವಕರ ಗುಂಪಿನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಕಮಿಷನರ್ ಅವರಿಗೆ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಜೆ ಪಿ ನಗರದಲ್ಲಿ ಈ ರೀತಿ ವ್ಹೀಲಿಂಗ್ ಮಾಡುವುದು ಕಂಡುಬಂದಿದ್ದು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೇಜಸ್ವಿ ಬೇಸರ ವ್ಯಕ್ತಪಡಿಸಿದ್ದಾರೆ.
ಜೆ ಪಿ ನಗರದ ಪೋಲಿಸ್ ಬೂತ್ ರಸ್ತೆಯಲ್ಲಿ ಮತ್ತು ಜೆ ಎಸ್ ಎಸ್ ಪಬ್ಲಿಕ್ ಸ್ಕೂಲ್ ಬಿಡುವ ಮಧ್ಯಾನ 3.30 ರ ಸಮಯದಲ್ಲಿ ಶಾಲೆಯ ಮುಂದೆಯೇ ಯುವಕರ ಗುಂಪು ವೀಲಿಂಗ್ ಮಾಡುತ್ತಾ ತೆರಳುತ್ತಾರೆ.
ಸಣ್ಣ ಸಣ್ಣ ಮಕ್ಕಳು ಶಾಲೆಯಿಂದ ಆಚೆ ಬರುವ ಸಮಯದಲ್ಲಿ ಈ ರೀತಿ ವೀಲಿಂಗ್ ಮಾಡುವಾಗ ಅನಹುತ ಅದರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೂಡಲೇ ಇಂತವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ನಾಳೆ ದಿನ ಅಮಾಯಕರಿಗೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ಆದ ಕಾರಣ ವೀಲಿಂಗ್ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ಒಂದು ತಂಡ ರಚನೆ ಮಾಡಿ ವೀಲಿಂಗ್ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಕಮಿಷನರ್ ಅವರಿಗೆ ಮನವಿ ಮಾಡಿದ್ದಾರೆ.