ನಾಳೆ ಸಾರ್ವಜನಿಕ ಗಣೇಶ ವಿಸರ್ಜನಾ ಮಹೋತ್ಸವ

Spread the love

‍ಮೈಸೂರು: ಸೆಪ್ಟೆಂಬರ್ 11 ರಂದು ಸಾರ್ವಜನಿಕ ಗಣೇಶ ವಿಸರ್ಜನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರು ಗಣೇಶ ಉತ್ಸವ ಸಮಿತಿ ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ನಾಳೆ ಮಧ್ಯಾಹ್ನ 2 ಗಂಟೆಗೆ ವೀರನ ಗೆರೆ ಗಣಪತಿ ದೇವಸ್ಥಾನ ಮತ್ತು ಜೆ ಎಲ್ ಬಿ ರಸ್ತೆ ಮಾಧವ ಕೃಪ ಮತ್ತಿತರೆಡೆ ಉತ್ಸವ ತೆರಳಿ ನಾಲ್ಕು ಗಂಟೆಗೆ ಅರಮನೆ ಉತ್ತರ ದ್ವಾರ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಆನಂತರ ದೇವರಾಜ ಅರಸು ರಸ್ತೆಯಲ್ಲಿ ಬೃಹತ್ ಮೆರವಣಿಗೆ ಮಾಡಿ ಸಾರ್ವಜನಿಕ ಗಣೇಶ ವಿಸರ್ಜನೆಯನ್ನು ನೆರವೇರಿಸಲಾಗುತ್ತದೆ.ಸಾರ್ವಜನಿಕರು ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರು ಪ್ರಾರ್ಥಿಸಿದ್ದಾರೆ.