ವಿಯಟ್ನಾಂ: ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಪ್ರವಾಸಿ ದೋಣಿ
ಮಗುಚಿ ಬಿದ್ದ ಕಾರಣ 34 ಮಂದಿ ನೀರು ಪಾಲಾಗಿದ್ದಾರೆ.
ಈ ಘಟನೆಯಲ್ಲಿ 8 ಜನ ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ವೇಳೆ ದಿಢೀರನೆ ಗುಡುಗು ಸಹಿತ ಭಾರೀ ಗಾಳಿ ಮಳೆ ಬಂದುದರಿಂದ ದೋಣಿ ಮಗುಚಿ ಬಿದ್ದಿದೆ.
ರಕ್ಷಣಾ ತಂಡಗಳು 11 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆ ನಡೆದ ಸ್ಥಳದ ಬಳಿ 27 ಶವಗಳನ್ನು ಹೊರತೆಗೆದಿವೆ. ಒಟ್ಟಾರೆ 34 ಮಂದಿ ಸಾವಿಗೀಡಾಗಿದ್ದಾರೆ.
ಭಾರತೀಯ ಕಾಲಮಾನ ಪ್ರಕಾರ ಶನಿವಾರ ಉತ್ತರ ವಿಯೆಟ್ನಾಂನಲ್ಲಿ ಹಠಾತ್ ಗುಡುಗು ಸಹಿತ ಮಳೆಯಿಂದಾಗಿ ಪ್ರವಾಸಿ ದೋಣಿ ಮಗುಚಿ ಎಂಟು ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಮೃತಪಟ್ಟಿದ್ದಾರೆ. 8 ಮಂದಿ ನಾಪತ್ತೆಯಾಗಿದ್ದಾರೆ.
ವಂಡರ್ ಸೀ ದೋಣಿಯು 53 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ವಿಯೆಟ್ನಾಂನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಹಾ ಲಾಂಗ್ ಕೊಲ್ಲಿಯ ಪ್ರವಾಸಕ್ಕೆ ಕರೆದೊಯ್ಯುತ್ತಿತ್ತು.
ಬಹುತೇಕ ಪ್ರಯಾಣಿಕರು ಹನೋಯ್‌ನ ಪ್ರವಾಸಿಗರಾಗಿದ್ದರು, ಅವರಲ್ಲಿ ಸುಮಾರು 20 ಮಕ್ಕಳು ಸೇರಿದ್ದರು.ಪ್ರತಕೂಲ ಹವಾಮಾನದಲ್ಲೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.